ಅಗಳಕೇರಾದಲ್ಲಿ ಕಾರ್ತಿಕೊತ್ಸವ ಮತ್ತು ನಾಟಕ

 ಕೊಪ್ಪಳ : ತಾಲೂಕಿನ ಅಗಳಕೇರಿ ಗ್ರಾಮದಲ್ಲಿ ಶ್ರೀಮಾರುತೇಶ್ವರ ಕಾರ್ತಿಕೊತ್ಸವದ ಅಂಗವಾಗಿ ದಿನಾಂಕ: ೨೦-೧೨-೨೦೧೪ ರಂದು ಶನಿವಾರ ಸಾಯಂಕಾಲ ಭಕ್ತರು ದೀಡನಮಸ್ಕಾರ ಹಾಕಿದರು ರಾತ್ರಿ ದೀಪೋತ್ಸವ ನೇರವೆರಿತು ಬಾನುವಾರ ಬೆಳಿಗ್ಗೆ ಉಚ್ಚಯ ಭಕ್ತರು ಎಳೆದರು ಮಧ್ನಾಹ ಮುಳ್ಳೋತ್ಸವ ನೆಡೆಯಿತು ಇದಾದ ನಂತರ ಅನ್ನಸಂತರ್ಪಣೆ ನಡೆಯಿತು  ಸಾಯಂಕಾಲ ಅಗ್ನಿಕುಂಡ ನೆರೆವೆರಿತು. ಹಾಗೂ ಅದೇ ದಿನ ರಾತ್ರಿ  ಶ್ರೀರಾಮಲಿಂಗೇಶ್ವರ ಸೇವಾ ನಾಟ್ಯ ಸಂಘದವರು ಕರ್ಮದ ಕುಸಿಗೆ ಧರ್ಮದ ತೊಟ್ಟಿಲು ನಾಟಕವನ್ನು ಶ್ರೀಶ್ರೀಶ್ರೀ ೧೦೮ ಶಿವಾಚಾರ್ಯ ಮಹಾಸ್ವಾಮಿ ಮೈನಹಳ್ಳಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು, ನಂತರ ಸ್ವಾಮಿಜೀಗಳಿಂದ ಆರ್ಶಿವಚನ ನೀಡಿದರು 
        ಗ್ರಾಮೀಣ ಪ್ರದೇಶದಲ್ಲಿ ಕಲೆ, ಸಂಸ್ಕೃತಿಕ ಕಾರ್ಯಕ್ರಮ, ನಾಟಕ, ಬಯಲಾಟ, ವೀರಗಾಸಿ ಕುಣಿತಾ, ಡೊಳ್ಳು ಕುಣಿತಾ ಮತ್ತು ಭಜನೆ ಹಳ್ಳಿಯಲ್ಲಿ ಮಾತ್ರ ಉಳಿದಿದೆ. ಇಂದಿನ ಯುಗದಲ್ಲಿ ಮೂಬೈಲ್, ಟಿವಿ, ಕಂಪ್ಯೂಟರ್, ಮುತಾಂದವುಗಳಿಂದ ಹಳ್ಳಿಯ ಸಂಸ್ಕೃತಿಯನ್ನು ಹಾಳು ಮಾಡುತ್ತಿವೆ ಇನ್ನೂ ಗ್ರಾಮೀಣ ಪ್ರದೆಶದಲ್ಲಿ ವರ್ಷಕೊಮ್ಮೆ ಹಬ್ಬ ಹರಿದಿನಗಳಲ್ಲಿ ನಾಟಕ, ಬಯಲಾಟ, ಪ್ರದರ್ಶನಗೊಳ್ಳುವುದು ಸಂತಸದ ವಿಷಯ ಎಂದು ಸ್ವಾಮಿಜೀಯವರು ಹೆಳಿದರು. ಮತ್ತು ಜಿಲ್ಲಾ ಪಂಚಾಯತಿ ಸದಸ್ಯರಾದ ಟಿ.ಜನಾರ್ಧನರವರು ಗ್ರಾಮೀಣ ಪ್ರದೇಶದಲ್ಲಿ ನಾಟಕ ಬಯಲಾಟಗಳನ್ನು ವರ್ಷಕೊಮ್ಮೆಯಾದರು ನಡೆಯಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಇರಬೇಕು ನಿಮ್ಮ ಗ್ರಾಮ ಸ್ವಚ್ಚತೆ ಇದ್ದರೆ ರೋಗ ರುಜಿನಿ ಮನುಷ್ಯರಿಗೆ ಬರತಕಂತಹ ಚೀಕನಗುನ್ಯ, ಕಾಲರಾ, ಮುಂತಾದರೋಗಗಳು ಬರುವುದಿಲ್ಲಾ ಆದ ಕಾರಣ ಪ್ರತಿ ಕುಟುಂಬಕ್ಕು ಶೌಚಾಲಯವನ್ನು ಕಟ್ಟಿಸಿಕೊಳ್ಳಬೇಕು ಎಂದು ಈ ಸಮಾರಂಭದಲ್ಲಿ ಜನರಿಗೆ ತಿಳಿಸಿಕೊಟ್ಟರು
  ಈ ಸಮಾರಮಭದಲ್ಲಿ ಕೊಟ್ರಯ್ಯ ಸ್ವಾಮಿ ಹಿರೇಮಠ  ಅಧ್ಯಕ್ಷರು ತಾಲೂಕ ರಂಗ ಭೂಮಿ ಸಂಘ, ಮರ್ದಾನಪ್ಪ ಬಿಸನಳ್ಳಿ, ವೆಂಕಟೇಶ ವಡ್ಡರ್, ಜಂಬಣ್ಣ ಶಟರ್ ತಿಪ್ಪಣ್ಣ ವಡ್ಡರ್, ನಾಗರಾಜ ಪಟವಾರಿ, ಹುಲಗಪ್ಪ ಗಡಾದ, ಜಂಬಣ್ಣ ಹೂಗಾರ, ಲಿಂಗರಾಜ ಚಳಿಗೇರಿ, ಮಲಿಕಾರ್ಜುನ ಕಿನ್ನಾಳ, ಭರಮಪ್ಪ ಮುಂಗಲಿ, ಸೋಮಲಿಂಗಪ್ಪ  ಚಳಿಗೇರಿ, ರಾಮಕೃಷ್ಣ ಬಿಲಂಕರ್, ವೆಂಕಣ್ಣ ಕುರಡೆಕರ್, ಕೊಟ್ರಪ್ಪ ಕೊರಗಲ್, ವೀರಭದ್ರಯ್ಯ ಭೂಸುನುರ ಮಠ, ಕಾರ್ಯಕ್ರಮ ನಿರೂಪಣೆ ಮಾಡಿದರು ಕೊನೆಯಲ್ಲಿ ವಂದನಾರ್ಪಣೆಯನ್ನು ದೇವರಾಜ ಗಡಾದ ನೆರೆವೆರಿಸಿದರು. 
Please follow and like us:

Leave a Comment