ಇಟಗಿ ಜನಪದ ಜಾತ್ರೆಗೆ ಚಾಲನೆ. . . . .

ಯಲಬುರ್ಗಾ : ತಾಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆಯವರ ಆಶ್ರಯದಲ್ಲಿ ಗುರುವಾರ ರಾತ್ರಿ ಜರುಗಿದ `ಇಟಗಿ ಉತ್ಸವ-೨೦೧೩’ ಸಮಾರಂಭದಲ್ಲಿ ಇಟಗಿ ಜನಪದ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನವೀನಕುಮಾರ ಗುಳಗಣ್ಣವರ್ ಮಾತನಾಡಿದರು. ಮನರಂಜೆನೆಯ ಜೊತೆಗೆ ಜನರಂಜನೆಯ ಅಗತ್ಯವಿದೆ. ಇಂತಹ ಚಿಕ್ಕ ಹಳ್ಳಿಯಲ್ಲಿ “ಇಟಗಿ ಉತ್ಸವ” ಅದ್ದೂರಿಯಾಗಿ ಯಶಸ್ವಿಯಾಗಿ ಉದ್ಘಾಟನೆಗೊಳ್ಳಬೇಕಾದರೆ ಸರ್ವ ಜನತೆಯ ಸಹಕಾರ ಮುಖ್ಯ ಅದನ್ನು ತಾವೆಲ್ಲರೂ ನಾಗರೀಕ ವೇದಿಕೆ ಪದಾಧಿಕಾರಿಗಳಿಗೆ ನೀಡಿದ್ದೀರಿ ಎಂದು ಹೇಳಿದ ಅವರು, ಇಟಗಿಯ ಮಹದೇವ ದೇವಾಲಯದ ಉತ್ಸವಕ್ಕೆ ಕಾರಣಿಕರ್ತರಾದ ಪತ್ರಕರ್ತರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಅವರಿಗೆ ದನ್ಯವಾದ ಅರ್ಪಿಸಿದರು. ಪ್ರತಿಯೊಬ್ಬರೂ  ಸಂಸ್ಕೃತಿ ಉಳಿವಿನತ್ತ ಆಶಕ್ತಿ ವಹಿಸಿದರೆ, ಇಂತಹ ಉತ್ಸವಗಳಿಗೆ ಅರ್ಥ ಬರಲಿದೆ. ಐತಿಹಾಸಿಕ ಮಹತ್ವ ಸಾರುವ ಸ್ಥಳದಲ್ಲಿ ಇಟಗಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿರುವದು ಸಂತೋಷದ ಸಂಗತಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಯಲಬುರ್ಗಾ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,  ಹಿಂದಿನ ಕಾಲದ ರಾಜರ ಶ್ರೀಮಂತಿಕೆ, ಅಧಿಕಾರ ದರ್ಪ ಉಳಿದಿಲ್ಲ, ಆದರೆ ಅವರು ನಿರ್ಮಿಸಿದ ದೇವಾಲಯಗಳು ಉಳಿದು ಬಂದಿರುವದು ಸಾಂಸ್ಕ್ರತಿಕ ಪರಂಪರೆಯ ದ್ಯೋತಕ ಎಂದರು. ನಂದಿ ಹೋಗುವ ದೀಪಕ್ಕಿಂತ ತಲೆಯಲ್ಲಿರುವ ಜ್ಞಾನದ ದೀಪ ಬೆಳಗಿಸುವ ಉದ್ದೇಶ ತಮ್ಮದಾಗಿದ್ದು, ರಾಜ್ಯದಲ್ಲಿರುವ ದೇವಾಲಯಗಳಿಗೆ ಹೋಲಿಸಿದರೆ ಇಟಗಿ ಮಹದೇವ ದೇವಾಲಯ ಕರ್ನಾಟಕ ಸಂಸ್ಕೃತಿಯ ಪರಂಪರೆಯ ತೊಟ್ಟಿಲಾಗಿದೆ ಎಂದು ಹೇಳಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘಟಿಕ ಮಹೇಶಬಾಬು ಸುರ್ವೆ, ಸುಮಾರು ೯೦೦ ವರ್ಷಗಳ ಇತಿಹಾಸ ಸಾರುವ ದೇವಾಲಯ ಚರ್ಕವರ್ತಿ ಎಂದು ಖ್ಯಾತಿ ಪಡೆದಿರುವ ಮಹದೇವ ದೇವಾಲಯವನ್ನು ಕನಾಟಕ ಪ್ರವಾಸಿ ನಕಾಶೆಗೆ ಸೇರ್ಪಡೆ ಮಾಡುವಂತೆ ಸಕಾರಕ್ಕೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ತಾ.ಪಂ ಸದಸ್ಯ ರಾಜಶೇಖರ್ ಹೊಂಬಳ, ಸಿದ್ದಪ್ಪ ಹಂಚಿನಾಳ, ಮಹೇಶಬಾಬು ಸುರ್ವೆ, ಕಸಾಪ ಹೋಬಳಿ ಅಧ್ಯಕ್ಷ ರಾಜಕುಮಾರ ಸುರ್ವೆ, ಸುಭಾಷ ಭಜೆಂತ್ರಿ, ಅಲ್ಲಾವುದ್ದೀನ್ ಎಮ್ಮಿ, ತಾಲೂಕಾ ನಾಗರೀಕ ವೇದಿಕೆ ಅಧ್ಯಕ್ಷ ಭೀಮಪ್ಪ ಕೆ.ನಾಯ್ಕರ್, ವಾರ್ತಾಧಿಕಾರಿ ಬಿ.ವಿ.ತುಕಾರಾಮ, ವೈ.ಬಿ.ಜೂಡಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Please follow and like us:
error