fbpx

ಕೆ.ಎಂ.ಸಯ್ಯದ್‌ಗೆ ಸನ್ಮಾನ

ಜಿಲ್ಲಾ ನ್ಯಾಯಾಧೀಶರಾದ ಡಿ.ಎಸ್.ಸಿಂಧೆಯವರಿಂದ
ಕೊಪ್ಪಳ : ನಗರದ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್‌ರವರನ್ನು ಜಿಲ್ಲಾ ನ್ಯಾಯಾಧೀಶ ಡಿ.ಎಸ್.ಸಿಂಧೆಯವರು ಇತ್ತೀಚಿಗೆ ಸನ್ಮಾನಿಸಿದರು.
ಅವರು ನಗರದಲ್ಲಿನ ಹಿರಿಯ ನ್ಯಾಯವಾದಿ ಪಿ.ಆರ್.ಹೊಸಳ್ಳಿಯವರ ನಿವಾಸದ ಆವರಣದಲ್ಲಿ ಇಲ್ಲಿಂದ ನಿವೃತ್ತಗೊಂಡ ಜಿಲ್ಲಾ ನ್ಯಾಯಾಧೀಶರಾದ ಡಿ.ಎಸ್.ಸಿಂಧೆಯವರಿಗೆ ಬೇಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿದರು.
ನವದೆಹಲಿಯ ಇಂದಿರಾ ಗಾಂಧಿ ಪ್ರೀಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿಗೆ ಲಭಿಸಿದೆ ಇವರ ಸಾಮಾಜಿಕ ಸೇವೆಯನ್ನು ಹಾಗೂ ನೀರ್‌ಸಾಬ ಎಂದೇ ಖ್ಯಾತಿ ಹೊಂದಿದ್ದಾರೆ ಇವರಿಂದ ಇನ್ನು ಹೆಚ್ಚು ಹೆಚು ಸಾಮಾಜಿಕೆ ಸೇವೆಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಕೀಲರಾದ ಆಸೀಪ್ ಅಲಿ, ಪೀರಾಹುಸೇನ್ ಹೊಸಳ್ಳಿ, ರಾಘವೇಂದ್ರ ಪಾನಗಂಟಿ, ವಿ.ಎಂ.ಭೂಸನೂರಮಠ, ನಗರಸಭಾ ಸದಸ್ಯೆ ಇಂದಿರಾ ಭಾವಿಕಟ್ಟಿ, ಜಾಕೀರ್ ಹುಸೇನ್ ಕಿಲ್ಲೇದಾರ ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!