ಶಿಕ್ಷಕರ ಮಕ್ಕಳ ಹೊಂದಾಣಿಕೆ ಕೊರತೆಯಿಂದ ಫಲಿತಾಂಶ ಹಿನ್ನಡೆ-ಉಮೇಶ ಪೂಜಾರ.

ಕೊಪ್ಪಳ- ಸೆ- ೧೬ ಶಿಕ್ಷಕರು ಮಕ್ಕಳ ಕಲಿಕೆಯ ಬಗ್ಗೆ ಹೊಂದಾಣಿಕೆ ಇಲ್ಲದೆ ಇರುವದರಿಂದ ಕಳೆದ ಸಾಲಿನಲ್ಲಿ ಎಸ್.ಎಸ್,ಎಲ್.ಸಿ ಫಲಿತಾಂಶದಲ್ಲಿ ಹಿನ್ನಡೆಯಾಗಲು ಕಾರನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಹೇಳಿದರು. ಅವರಿಂದು ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ೨೦೧೫-೧೬ರ ತಾಲೂಕು ಮಟ್ಟದ ಎಸ್.ಎಸ್.ಎಲ್.ಸಿ ಪರೀಕ್ಷಾ ಸುಧಾರಣ ಆಂಗ್ಲಭಾಷಾ ಕಾರ್ಯಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು..
    ಅವರಿಂದು ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ೨೦೧೫-೧೬ರ ತಾಲೂಕು ಮಟ್ಟದ ಎಸ್.ಎಸ್.ಎಲ್.ಸಿ ಪರೀಕ್ಷಾ ಸುಧಾರಣ ಆಂಗ್ಲಭಾಷಾ ಕಾರ್ಯಗಾರ ಕಾರ್ಯಕ್ರಮ ಉದ್ಘಾಟಿಸಿ
ನೋಡಲ್ ಅಧಿಕಾರಿ ಶ್ರೀನಿವಾಸ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಲು ಎಲ್ಲಾ ಶಾಲೆಗಳ ಶಿಕ್ಷಕರು ಒಂದೆಡೆ ಸೇರಿ ಚರ್ಚಿಸಿ ಬಗೆಹರಿಸಿಕೊಳ್ಳಲು ವೇದಿಕೆ ಅವಶ್ಯ ಇಂತಹ ಇಂಗ್ಲೀಷ್ ಕಾರ್ಯಗಾರಗಳಿಂದ ಶಿಕ್ಷಕರು ಉತ್ತೇಜನಗೊಂಡು ಇನ್ನೂ ಉತ್ತಮ ಪಾಠ ಭೋಧನೆಗೆ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಶ್ರೀನಿವಾಸ ಹೇಳಿದರು. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ ೧೬ನೇ ಸ್ಥಾನ ಪಡೆದಿದ್ದು, ಆದರೆ ಈ ಸಾರಿಯ ಫಲಿತಾಂಶದಲ್ಲಿ ೩೦ನೇ ಸ್ಥಾನಕ್ಕೆ ಕುಸಿದಿದ್ದು ಇದನ್ನು ಮನಗೊಂಡ ಶಿಕ್ಷಣ ಇಲಾಖೆಯು ಎಲ್ಲ ಶಿಕ್ಷಕರನ್ನು ಒಂದುಗೂಡಿಸಿ ಮುಕ್ತ ಸಮಾಲೋಚನೆ ನಡೆಸಿ ಈ ಸಾರಿಯ ಫಲಿತಾಂಶವನ್ನು ಉತ್ತಮ ಪಡಿಸುವುದಕ್ಕಾಗಿ ಈ ಕಾರ್ಯಗಾರವನ್ನು ಇಲಾಖೆಯು ಹಮ್ಮಿಕೊಂಡಿದೆ. ಎಂದ ಅವರು ಇಂದು ಪ್ರತಿಯೊಂದು ಮಕ್ಕಳ ಬೆಳವಣಿಗೆಗೆ ಇಂಗ್ಲೀಷ್ ಕಾರ್ಯಗಾರ ಸಮಯೋಜಿತವಾಗಿದ್ದು ಅದು ಪರಿಣಿತ ಮಕ್ಕಳಿಗೆ ಸ್ಪೂರ್ತಿಯ ಸೆಲೆಯಾಗುವದಕ್ಕೆ ಶಿಕ್ಷಕರ ಪರಿಶ್ರಮ ಅಗತ್ಯವೆಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ ಮಾತನಾಡಿ ಸರ್ಕಾರವು ಇಂದು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕೆಂದು ಹಲವಾರು ಸವಲತ್ತುಗಳನ್ನು ನೀಡುತ್ತಿದ್ದರೂ, ಅದನ್ನು ಬಳಿಸಿಕೊಳ್ಳಲು ವಿದ್ಯಾರ್ಥಿಗಳೊಂದಿಗೆ ಪಾಲಕರು ಕೂಡ  ವಿಫಲರಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮ ಭೋಧನೆ ಮಾಡುತಿದ್ದರೂ ಕೆಲವರು ಡೊನೇಷನ್ ನೀಡಿ ಖಾಸಗೀ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಪ್ರೇರೆಪಿಸಿ ತಾವು ಕೂಡ ಪಾಲುದಾರರಾಗಿರುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಕಡುಬಡತನದಲ್ಲಿ ಬಂದು ಅಭ್ಯಾಸ ಮಾಡಿದರೂ ಪಾಲಕರ ನಿಷ್ಕಾಳಜಿಯ ಪರಿಣಾಮ ಫಲಿತಾಂಶ ಹಿನ್ನಡೆಯಾಗಲು ಕಾರಣವಾಗಿದೆ. ಈ ಕಾರ್ಯಗಾರ ೧೦ನೇ ಕ್ಲಾಸಿಗೆ ಸೀಮಿತವಾಗಬಾರದು ೫ನೇ ತರಗತಿಯಿಂದಲೇ ಶಿಕ್ಷಕರು ಮಕ್ಕಳಿಗೆ ಇಂಗ್ಲೀಷನ್ನು ಆಡು ಭಾಷೆಯಲ್ಲಿ ಕಲಿಸಿದರೆ ಮಕ್ಕಳನ್ನು ಆಂಗ್ಲಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುವುದು ಎಂದು ಬೋಧಕರಿಗೆ ಕರೆ ನೀಡಿದರು.
ವೇದಿಕೆ ಮೇಲೆ ಶಾಲೆಯ ಮುಖ್ಯೋಪಾದ್ಯಯ ಕರಿಬಸಪ್ಪ ಪಲ್ಲೇದ, ಆದರ್ಶ ಶಾಲೆಯ ಮಹಾಂತೇಶ, ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾದ ಸುಶೀಲ ನವಲಿ, ನಾಗನಗೌಡ ಇನ್ನಿತರು ಸೇರಿ ತಾಹೇರಾಬೇಗಂ, ಪ್ರೇಮಾವತಿ ಪಾಟೀಲ, ವೀರಯ್ಯ ಒಂಟಿಗೊಡಿಮಠ, ಗೋಪಾಲರಾವ್ ಗುಡಿ, ಶೋಭಾ ಗಡಾದ ಹಾಗೂ ರೋಹಿಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಚೈತ್ರ ಮತ್ತು ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಕಾರ್ಯಕ್ರಮ ನಿರೂಪಣೆಯನ್ನು ಹಿರಿಯ ಶಿಕ್ಷಕಿ ಮಂಜುಳಾ.ವಿ. ನೆರವೇರಿಸಿದರು. ಕೊನೆಯಲ್ಲಿ ಶಿಕ್ಷಕಿ ಶೈಲಜಾ ಎಚ್. ವಂದಿಸಿದರು.

ಮಾತನಾಡಿದರು. ಹೈದರಾಬಾದ ಕರ್ನಾಟಕ ಮಕ್ಕಳು ತೀರ ಬಡತನದಲ್ಲಿ ಬಂದು ಶೈಕ್ಷಣಿಕವಾಗಿ ಹಿಂದುಳಿದಿವೆ ಅಂತಹ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಯತ್ನ ಪಡಬೇಕು ಶಿಕ್ಷಕರು ಪಾಠ ಮುಗಿಸುವುದೇ ಉದ್ದೇಶ ಹೊಂದದೆ ಮಕ್ಕಳಗೆ ಅರ್ಥವಾಗುವ ರೀತಿಯಲ್ಲಿ ಭೋಧನೆ ಮಾಡಿ ಮಕ್ಕಳಿಗೆ ನಿಲುಕುವಂತಹ ಚಟುವಟಿಕೆಗಳ ನೀಡಿದಾಗ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾದ್ಯ. ದೃಶ್ಯ ಮಾದ್ಯಮ ಹಿಂದಿನ ಪ್ರಶ್ನೆ ಪತ್ರಿಕೆಗಳು ಬಿಡಿಸುವ ಮುಂತಾದವುಗಳ ಮೂಲಕ ಶಿಕ್ಷಣ ನೀಡಿ ಮುಂದೆ ಉತ್ತಮ ಫಲಿತಾಂಶ ಬರಲು ಪ್ರಯತ್ನಿಸಬೇಕು ಮುಂದಿನ ನವಂಬರನಲ್ಲಿ ಹೊಲಯ ಮಟ್ಟದ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.

Please follow and like us:
error