You are here
Home > Koppal News > ವಿಶ್ವಏಡ್ಸ ದಿನಾಚರಣೆ

ವಿಶ್ವಏಡ್ಸ ದಿನಾಚರಣೆ

ಕೊಪ್ಪಳ;೦೧ ದ.ಭಾ.ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯ ಕೊಪ್ಪಳದಲ್ಲಿ ದ.ಭಾ.ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನಾ ಘಟಕ ಕೊಪ್ಪಳ,ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳದ ವತಿಯಿಂದ. ದ.ಭಾ.ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯ ಕೊಪ್ಪಳದಲ್ಲಿ ಇಂದು ವಿಶ್ವಏಡ್ಸ ದಿನಾಚರಣೆಯನ್ನು ಆಚರಿಸಲಾಯಿತು .
                   ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ  ಏಡ್ಸ ತಡೆಗಟ್ಟುವಿಕೆ  ಮತ್ತು ನಿಯಂತ್ರಣಾಧಿಕಾರಿಯದ ಡಾ/ಎಸ್,ಕೆ.ದೇಸಾಯಿಯವರು ಏಡ್ಸನ್ನು ಸಂಪೂರ್ಣವಾಗಿ ನಿಯಂತ್ರuದಲ್ಲಿ ತರಲು ಜನರಲ್ಲಿ ಏಡ್ಸ ಬಗ್ಗೆ ಅರಿವನ್ನು ಮೂಡಿಸುವುದು  ಅವಶ್ಯಕವಾಗಿದೆ.ಎಂದು ಅಭಿಪ್ರಾಯ ಪಟ್ಟರು  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಯುಷ್ಯ ವೈದ್ಯಾಧಿಕಾರಿಯಾದ ಡಾ|| ಎಮ್.ಬಿ. ಸಜ್ಜನ್ ಇವರು ಎಚ್.ಐ.ವಿ.ಸೊಂಕು ತಗುಲಿದ ವ್ಯಕ್ತಿಯು ಸೂಕ್ತ ಚಿಕಿತ್ಸೆಯನ್ನು ಪಡೆದರೆ ತನ್ನ ಸಂಪೂರ್ಣ ಆಯುಷ್ಯದವರೆಗೆ ಜೀವಿಸಬಹುದು ಎಂದು ಹೇಳಿದರು ಇನ್ನೊರ್ವ ಅತಿಥಿಗಳಾದ ಜಿಲ್ಲಾ ಏಡ್ಸ ನಿಯಂತ್ರu ಮತ್ತು  ತಡೆಗಟ್ಟುವಿಕೆ  ಸಂಸ್ಥೆಯ ಮೇಲ್ವಿಚಾರಕರಾದ   ಪ್ರಭು ಅವರು ಏಡ್ಸ ರೋಗವು ಕೇವಲ ೪ ವಿಧಾನಗಳ ಮೂಲಕ ಸೋಂಕು ಹರಡುವದು ಇದು ಕೇವಲ ರೋಗಿಗಳನ್ನು ಮುಟ್ಟುವ ಮಾತನಾಡಿಸುವ ಅಥವಾ ಅವರೊಟ್ಟಿಗೆ ಊಟ ಮಾಡುವ ಮೂಲಕ ಹರಡುವುದಿಲ್ಲವೆಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷ್ಷತೆಯನ್ನು ಕಾನೂನು ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಸ್.ಹನಸಿ ವಹಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಹಾಗೂ ಉಪನ್ಯಾಸಕರಾದ ಬಸವರಾಜ ಎಸ್.ಎಮ್. ಶ್ರೀಮತಿ ಉಷಾದೇವಿ ಹಿರೇಮಠ ,  ಎಸ್,ಎಮ್,ಪಾಟೀಲ, ಸೈಯದ್ ಖುಸ್ರು, ಡಾ.ಮುದ್ದುರಾಜ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದು  ಉಪನ್ಯಾಸಕರಾದ ಪ್ರೊ.ಕೆ.ನಾಗಬಸಯ್ಯ ಸ್ವಾಗತಿಸಿದರು  ವಿದ್ಯಾರ್ಥಿಯಾದ   ರಾಕೇಶ.ಕೆ ವಂದಿಸಿದರು ,ಮಂಜುನಾಥ ನಿರೂಪಿಸಿದರು ಹಾಗೂ ಗಿರಿಜಾ ಮತ್ತು ಶಿಲ್ಪಾ ಪ್ರಾರ್ಥಿಸಿದರು.

Leave a Reply

Top