ಗಂಗಾವತಿ ಮತ್ತು ಕುಷ್ಟಗಿಯಲ್ಲಿ ಮಕ್ಕಳ ಕಾವ್ಯ ಕಮ್ಮಟ

ಕೊಪ್ಪಳ, ನ. ೧೯. ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಕುಷ್ಟಗಿ ತಾಲೂಕ ಮಟ್ಟದ ಆಯ್ದ ಮಕ್ಕಳಿಗೆ ಹಾಗೂ ಯುವ ಕವಿಗಳಿಗೆ ಎರಡು ದಿನಗಳ ವಸತಿ ರಹಿತ ಕಾವ್ಯ ಕಮ್ಮಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಎರಡು ದಿನ ನಡೆಯುವ ಕಮ್ಮಟದಲ್ಲಿ ಆಯ್ದ ಕವಿಗಳಿಗೆ ಹಾಗೂ ಮಕ್ಕಳಿಗೆ ಕಾವ್ಯ ಹುಟ್ಟು, ರಚನೆ, ಸ್ವಾದ, ಅಭಿರುಚಿಯ ಬಗ್ಗೆ ವಸತಿ ರಹಿತ ತರಬೇತಿ ಹಮ್ಮಿಕೊಳ್ಳಲಾಗಿದೆ. ನವೆಂಬರ್ ೨೭ ಮತ್ತು ೨೮ ಕುಷ್ಟಗಿ ತಾಲೂಕ ಹಾಗೂ ಡಿಸೆಂಬರ್ ೧ ಮತ್ತು ೨ ರಂದು ಗಂಗಾವತಿ ತಾಲೂಕಿನಲ್ಲಿ ಬಾಲವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ದಲಿತ ಸಾಹಿತ್ಯ ಪರಿಷತ್ತು ಹಾಗೂ ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿವೆ.
ಆಯಾ ತಾಲೂಕಿನವರು ಪಾಲ್ಗೊಳ್ಳಲು ನವೆಂಬರ್ ೨೪ ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಒಂದು ತಾಲೂಕಿಗೆ ಒಟ್ಟು ೩೫ ಜನರಿಗೆ (೩೦ ಮಕ್ಕಳು, ೫ ಯುವ ಕವಿಗಳು) ಮಾತ್ರ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದವರಿಗೆ ಪ್ರಶಂಸನಾ ಪತ್ರ ನೀಡಲಾಗುವದು. ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನಕ್ಕಾಗಿ ಮಂಜುನಾಥ ಜಿ. ಗೊಂಡಬಾಳ, ಮೊ : ೯೭೪೪೮೩೦೦೦೭೦ ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply