ನ.೨೬ ರಂದು ಸಂವಿಧಾನ ದಿನ ಆಚರಣೆಗೆ ಸೂಚನೆ.

ಕೊಪ್ಪಳ,
ನ.೨೪ (ಕ ವಾ) ರಾಜ್ಯಾದ್ಯಂತ ನ.೨೬ ರಂದು ‘ಸಂವಿಧಾನ ದಿನ’ ವನ್ನು
ಆಚರಿಸಲಾಗುತ್ತಿದ್ದು., ಅಂದು ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ
ಸರ್ಕಾರಿ ಕಾರ್ಯಾಲಯಗಳಲ್ಲಿ ಸಂವಿಧಾನದ ಪ್ರಿಮೆಂಬಲ್ ಅನ್ನು ತಪ್ಪದೆ ಓದುವ ಮೂಲಕ
ಸಂವಿಧಾನ ದಿನವನ್ನು ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ||ಪ್ರವೀಣಕುಮಾರ್ ಜಿ.ಎಲ್
ಅವರು ತಿಳಿಸಿದ್ದಾರೆ.
ಡಿ.೦೧ ರಂದು ತಾಲೂಕಾ ಪಂಚಾಯತಿ ಕೆ.ಡಿ.ಪಿ ಸಭೆ.
ಕೊಪ್ಪಳ,
ನ.೨೪ (ಕ ವಾ)ಕೊಪ್ಪಳ ತಾಲೂಕಾ ಪಂಚಾಯತಿಯ ಪ್ರಸಕ್ತ ಸಾಲಿನ ದ್ವಿತೀಯ
ತ್ರೈಮಾಸಿಕ ಕೆ.ಡಿ.ಪಿ ಸಭೆಯನ್ನು ಡಿ.೦೧ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ತಾಲೂಕಾ
ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳ ಶಾಸಕ ಕೆ.ರಾಘವೇಂದ್ರ
ಹಿಟ್ನಾಳ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಕೊಪ್ಪಳ ತಾಲೂಕಾ ಮಟ್ಟದ ಎಲ್ಲ
ಅನುಷ್ಠಾನಾಧಿಕಾರಿಗಳು ೨೦೧೫ರ ಸೆಪ್ಟಂಬರ್ ಅಂತ್ಯದವರೆಗೆ ತಮ್ಮ ಇಲಾಖೆ ಸಾಧಿಸಿದ ಪ್ರಗತಿ
ವರದಿಯೊದಿಗೆ ಕಡ್ಡಾಯವಾಗಿ ಹಾಗೂ ಖುದ್ದಾಗಿ ಸಭೆಗೆ ಹಾಜರಾಗುವಂತೆ ತಾಲೂಕಾ ಪಂಚಾಯತಿ
ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. 

Related posts

Leave a Comment