ರಾಜ್ಯಮಟ್ಟದ ಬೃಹತ್ ಯುವಜನ ಸಮಾವೇಶ

ಕೊಪ್ಪಳ ಡಿ.   ರಾಜ್ಯಮಟ್ಟದ ೨೦೦೯-೧೦ನೇ ಸಾಲಿನ ಬೃಹತ್ ಯುವಜನ ಸಮಾವೇಶವನ್ನು ಡಿ. ೨೯ ಮತ್ತು ೩೦ ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. 
ಡಿ.೨೯ ರಂದು ಮದ್ಯಾಹ್ನ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಕೊಪ್ಪಳ ಜಿಲ್ಲೆಯಿಂದ ೫೦ ಜನ ಯುವಕ  ಯುವತಿಯರು ಭಾಗವಹಿಸಬಹುದಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸುವವರು ತಮ್ಮ ತಂಡದ ವ್ಯವಸ್ಥಾಪಕರೊಂದಿಗೆ ದಿ.೨೯ರ ಬೆಳಿಗ್ಗೆ ೧೧ ಗಂಟೆಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಭಾಗವಹಿಸುವ ಯುವಕ-ಯುವತಿಯರಿಗೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೯೪೫೫೫೫೩೨೦ ಕೆ.ಎಂ.ಪಾಟೀಲ್ ಅಥವಾ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಎನ್.ಘಾಡಿ  ಕೋರಿದ್ದಾರೆ. 
Please follow and like us:
error