ಎಂ.ಎಂ.ಕಲ್ಬುರ್ಗಿರವರ ಹತ್ಯೆಮೂಲಭೂತವಾದಿಗಳ ಹತಾಶೆಯ ಹೇಯ ಕೃತ್ಯ- ಭಾರಧ್ವಾಜ್.

ಸಂಶೋಧಕ ಪ್ರೊ. ಎಂ.ಎಂ.ಕಲ್ಬರ್ಗಿಯವರನ್ನು ಮೂಲಭೂತವಾದಿಗಳು ಅವರ ಮನೆಯಲ್ಲಿಯೇ ಹತ್ಯೆ ಮಾಡಿರುವುದು ಖಂಡನೀಯ, ಸರಕಾರ ಕೂಡಲೇ ಅಪರಾಧಿಗಳನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ಸರಕಾರವನ್ನು ಒತ್ತಾಯಿಸಿದ್ದಾರೆ. ಸಂಶೋಧಕರಾದ ಪ್ರೊ. ಎಂ.ಎಂ.ಕಲ್ಬುರ್ಗಿಯವರು ಅನೇಕ ಸಂಶೋಧನೆಗಳನ್ನು ಮಾಡಿ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ಇವರ ಹೇಳಿಕೆಗಳಲ್ಲಿರುವ ಸತ್ಯವನ್ನು ಅರಗಿಸಿಕೊಳ್ಳಲಾರದೆ ಮೂಲಭೂತವಾದಿಗಳು ಇವರನ್ನು ಹತ್ಯೆಗೈದಿದ್ದಾರೆ. ಕಲ್ಬುರ್ಗಿಯವರು ನಿಧನರಾದರು ಅವರ ವಿಚಾರಗಳು ಮತ್ತು ಅವರ ಸಂಶೋಧನೆಗಳು ಸಾಯುವುದಿಲ್ಲವೆಂದು ಹಂತಕರು ತಿಳಿದುಕೊಳ್ಳಬೇಕು. ಹುತಾತ್ಮರಾದ ಎಂ.ಎಂ.ಕಲ್ಬುಗಿಯವರು ಕೋಟ್ಯಾಂತರ ಜನ ಪ್ರಗತಿಪರರಿಗೆ ಮಾರ್ಗದರ್ಶಿಯಾಗಿದ್ದಾರೆ. ಅವರ ವಿಚಾರಗಳನ್ನು ಸಂಶೋಧನೆಗಳನ್ನು ಸಹಿಸದ ನಕಲಿ ದೇಶಭಕ್ತರ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡುವ ಸಮಯ ಬಂದಿದೆ. ಸುಳ್ಳಿನಿಂದ ಬದುಕುವ ಮೂಲಭೂತವಾದಿಗಳಿಗೆ ಈಗಲಾದರೂ ತಕ್ಕಪಾಠ ಹೇಳದಿದ್ದರೆ ಮಾನವತಾವಾದಿಗಳಿಗೆ ಉಳಿಗಾಲವಿಲ್ಲವೆಂದು ಭಾರಧ್ವಜ್ ವಿಷಾದ ವ್ಯಕ್ತಪಡಿಸಿದ್ದಾರೆ.
Please follow and like us:
error

Related posts

Leave a Comment