ಗಿಣಿಗೇರಾ ಹಾಗೂ ಹುಲಿಗಿಯಲ್ಲಿ ವಿವಿಧ ರೈಲುಗಳ ನಿಲುಗಡೆಗೆ ಸಂಸದರ ಮನವಿ

 ಕೊಪ್ಪಳ ತಾಲೂಕಿನ ಗಿಣಿಗೇರಾ ಹಾಗೂ ಹುಲಿಗಿ ಗ್ರಾಮಗಳಲ್ಲಿ ಹಂಪಿ ಎಕ್ಸ್‍ಪ್ರೆಸ್, ಹೌರಾ ಎಕ್ಸ್‍ಪ್ರೆಸ್ ಹಾಗೂ ಅಮರಾವತಿ ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
  ಗಿಣಿಗೇರಾ ಗ್ರಾಮದ ಬಳಿ ಹಲವಾರು ಬೃಹತ್ ಕೈಗಾರಿಕೆಗಳಿದ್ದು, ವಿವಿಧ ರಾಜ್ಯಗಳು ಹಾಗೂ ವಿವಿಧ ಜಿಲ್ಲೆಗಳ ಜನರು ಇಲ್ಲಿನ ಕೈಗಾರಿಕೆಗಳಲ್ಲಿ ನೌಕರರಾಗಿದ್ದಾರೆ.  ಹುಲಿಗಿ ಗ್ರಾಮ ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಹಾಗೂ ಧಾರ್ಮಿಕ ಸೇವೆಗಾಗಿ ಆಗಮಿಸುತ್ತಾರೆ.  ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳನ್ನು ಗಿಣಿಗೇರಾ ಹಾಗೂ ಹುಲಿಗಿ ಗ್ರಾಮಗಳಲ್ಲಿ ನಿಲುಗಡೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ .

Leave a Reply