ದೇಶ ಕಂಡ ಅದ್ಭುತ ಚೇತನ ಅಬ್ದುಲ್ ಕಲಾಂ.

ಕೊಪ್ಪಳ: ಪತ್ರಿಕೆ ಹಂಚುವ ತ್ಯಂತ ಕೆಳಹಂತದಿಂದ ದೇಶದ ಅತ್ಯಂತ ಉನ್ನತ ಹುದ್ದೆಯಾದ ರಾಷ್ಟ್ರಪತಿಯ ಸ್ಥಾನಕ್ಕೆ ಏರುವ ಮೂಲಕ ಜಗತ್ತಿಗೇನೇ ಮಾದರಿಯಾದ ಏಕೈಕ ವ್ಯಕ್ತಿ ಡಾ. ಅಬ್ದುಲ್ ಕಲಾಂ ಎಂದು ಸಾಹಿತಿ ವಿಠಪ್ಪ ಗೋರಂಟ್ಲಿ ಅಭಿಪ್ರಾಯ ಪಟ್ಟರು.ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರು ಸೇರಿದ ಸಭೆಯಲ್ಲಿ ಮಾನಾಡುತ್ತ ಅಬ್ದುಲ್ ಕಲಾಂ ತಮ್ಮ ಬದುಕಿನಲ್ಲಿ  ಆದರ್ಶವನ್ನು ಮೆರೆದಂತೆ ಸಾವಿನಲ್ಲಿ ಯೂ ಆದರ್ಶ ಮೆರೆದರು ಅವರ ಆದರ್ಶ ನಮಗೆಲ್ಲ ಸದಾ ನೆನಪಾಗಿ ಉಳಿದರೆ ಅದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದರು. ಸಭೆಯಲ್ಲಿ ಅಕ್ಬರ್ ಕಾಲಿಮಿರ್ಚಿ ಅಬ್ದುಲ್ ಕಲಾಂ ಎಲ್ಲ ಧರ್ಮಗಳನ್ನು ಗೌರವಿಸುತ್ತ ಮಾನವೀಯತೆಗೆ ಮಾದರಿಯಾದರು ಬಸವರಾಜ ಶಿಲವಂತರ ಅವರೋಂದು ಸೌಹಾರ್ದತೆಗೆ ಸಂಕೇತವಾದರು ಕೊನೆಯ ಉಸಿರಿನವರೆಗೆ ದೇಶಕ್ಕೆ ಮಿಡಿದರು. ರಾಜಶೇಖರ ಅಂಗಡಿ ಸರಳವಾಗಿ ಬದುಕುತ್ತ ದೇಶದ ಉನ್ನತ ಹುದ್ದೆ ಸಾಧಿಸಿದ ಹಿರಿಯಚೇತನ ಸಿದ್ದಪ್ಪ ಹಂಚಿನಾಳ ಇಂಥ ಚೇತನ ಮತ್ತೊಮ್ಮೆ ಹುಟ್ಟಿಬರಲೆಂದರು. ಎಚ್. ರಘು ಅವರನ್ನು ಅಜಾತ ತೃ ಎಂದು ಬಣ್ಣಿಸಿದರೆ ಕಾರ್ಯಕ್ರಮ ನಿರ್ವಹಿಸಿ ಮಾತನಾಡಿದ ಎಸ್.ಜಿ. ಗೋನಾಳ ದೇಶದ ಜನರನ್ನು ಒಂದೆಡೆ ಸೇರಿಸುವಲ್ಲಿ ಮತ್ತು ಮನಸ್ಸು ಕಟ್ಟುವಲ್ಲಿ ದೊಡ್ಡಕೆಲಸಮಾಡಿದರು. ವಿದ್ಯಾರ್ಥಿಗಳಲ್ಲಿ ವಿಚಾರದ ಬೀಜ ಬಿತ್ತಿದ್ದರು ಎಂದರು.
ಗಿರೀಶ ಪಾನಘಂಟಿ ಡಿ, ಎಚ್, ಪೂಜಾರ ವೀರಣ್ಣಾ ಹುರಕಡ್ಲಿ, ಮಂಜುನಾಥ ಚಕ್ರಸಾಲಿ, ಬಸವರಾಜ ನರೇಗಲ್ ಉಪಸ್ಥಿತರಿದ್ದರು. ಆರಂಭದಲ್ಲಿ ಒಂದು ನಿಮಿಷ ಮೌನಾಚರಿಸಲಾಯಿತು. ರಾಜಶೇಖರ ಅಂಗಡಿ ವಂದಿಸಿದರು.
   

Leave a Reply