ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘಕ್ಕೆ ಆಯ್ಕೆ

ಕೊಪ್ಪಳ : ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮೈಲಾರಗೌಡ ಹೊಸಮನಿ, ಉಪಾಧ್ಯಕ್ಷರಾಗಿ ಯಶೋಧಾ ಹುನಗುಂದ, ಖಜಾಂಚಿಯಾಗಿ ಮಹೇಶ ಟಂಕಸಾಲಿಯವರು ಆಯ್ಕೆ ಯಾಗಿದ್ದಾರೆ. 
              ಆಯ್ಕೆಯಾದ ಅಭ್ಯರ್ಥಿಗಳಿಗೆ ಶಂಭುಲಿಂಗನಗೌಡ ಹಲಗೇರಿ, ಸಂಗಪ್ಪ ಅಂಗಡಿ, ರಾಜಶೇಖರಗೌಡ, ಲಷ್ಕರಿ ನಾಯ್ಕ, ಮಂಜುನಾಥ ಬಿ, ಸುಭಾಶ ರಡ್ಡಿ, ಶರಣಗೌಡ ಪಾಟೀಲ, ಬಸವರಾಜ ಬಂಡಿಹಾಳ, ಬಿ.ಕೆ. ಹಿರೇಮಠ, ಮುಂತಾದ ಶಿಕ್ಷಕರು ಅಭಿನಂದನೆ  ಸಲ್ಲಿಸಿದರು. ಈ ಸಂದರ್ಭದಲ್ಲಿ ಶಂಭುಲಿಂಗನಗೌಡ ಹಲಗೇರಿ ಮಾತನಾಡಿ, ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸಿ ಪತ್ತಿನ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಆಯ್ಕೆಯಾದ ಪದಾಧಿಕಾರಿಗಳಿಗೆ ಹೇಳಿದರು. ಪತ್ತಿನ ಸಂಘದ ನಿರ್ದೇಶಕರಾದ ಸಾವಿತ್ರಿ ಆರ್ ಕುಲಕರ್ಣಿ, ನಾಗರಾಜ ಹೆಚ್, ಅಂದಾನಗೌq, ಬಾಳಪ್ಪ ಕಾಳಿ ಉಪಸ್ಥಿತರಿದ್ದರು ಎಂದು ಬಸವರಾಜ ಬಂಡಿಹಾಳ ತಿಳಿಸಿದ್ದಾರೆ. 

Leave a Reply