ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಪಾದಯಾತ್ರೆ : ಸಿಪಿಐಎಂಎಲ್

 ಗಂಗಾವತಿ ತಾಲ್ಲೂಕಿನ ಹೊಸಕೇರ ಗ್ರಾಮ ಪಂಚಾಯಿತಿಯ ಸವಳ ಕ್ಯಾಂಪಿನಿಂದ ೧೨ ಕಿ.ಮೀ. ಪಾದಯಾತ್ರೆ ಮೂಲಕ ಸವಳಕ್ಯಾಂಪಿನ ೮೦ ಕುಟುಂಬಗಳು ಗಂಗಾವತಿಯ ಗಾಂಧೀ ವೃತ್ತದ ವರೆಗೆ ತೆರಳಿ ಉಪತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು .

ಈ ಸಂದರ್ಭದಲ್ಲಿ ಭಾರದ್ವಾಜ್ ಮಾತನಾಡಿ, ಈ ಕ್ಯಾಂಪಿನ ಸುತ್ತಮುತ್ತ ೫೦ ಎಕರೆಯಷ್ಟು ಸರ್ಕಾರಿ ಜಮೀನು ಇದ್ದು, ಆ ಭೂಮಿಯನ್ನು, ಭೂ ಮಾಲಿಕರು ಅನಧಿಕೃತ ಕಬ್ಜಾ ಹೊಂದಿ ಸಾಗುವಳಿ ಮಾಡುತ್ತಿದ್ದಾರೆ, ಕೂಡಲೇ ಒತ್ತುವರಿಯನ್ನು ತೆರವುಗೊಳಿಸಲು ಭಾರದ್ವಾಜ್ ಒತ್ತಾಯಿಸಿದರು.
ಈ ಕ್ಯಾಂಪಿನಲ್ಲಿ ’ಯಾನಾದಿ ನಾಯಕ’ ಸಮಾಜಕ್ಕೆ ಸೇರಿದ ೧೫ ಕುಟುಂಬಗಳು ಸುಮಾರು ೬೦ ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಇವರಿಗೆ ೩೦*೪೦ ಅಡಿ ಅಳತೆಯ ನಿವೇಶನಗಳನ್ನು ಮಂಜೂರು ಮಾಡಿತ್ತು, ಇತ್ತೀಚೆಗೆ ಅಕ್ರಮ ಸಾಗುವಳಿ ಮಾಡುತ್ತಿರುವ ರೈತರು ಈ ದಲಿತ ಕುಟುಂಬಗಳಿಗೆ ಮಂಜೂರಾದ ನಿವೇಶನ ಗಳನ್ನು ಒತ್ತುವರಿ ಮಾಡಿ, ನ್ಯಾಯ ಕೇಳಿದರೆ ಜೀವಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಈ ದಲಿತರ ಪರ ನಿಲ್ಲಬೇಕೆಂದುರು ಟಿ. ರಾಘವೇಂದ್ರೆ ಹೇಳಿದರು.
ಕಳೆದ ಸೆಪ್ಟಂಬರ್ ತಿಂಗಳಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಕೊಪ್ಪಳ ಘಟಕ ಸವಳ ಕ್ಯಾಂಪಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ಸತ್ಯಶೋಧನಾ ವರದಿಯನ್ನು ನೀಡುವುದರ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರವನ್ನು ಕೂಡ ಸಮಿತಿಯು ತನ್ನ ವರದಿಯಲ್ಲಿ ಪ್ರಸ್ಥಾವನೆ ಮಾಡಿತ್ತು. ಆದರೂ ಕೂಡ ಇಲ್ಲಿಯವರೆಗೆ ಈ ಕ್ಯಾಂಪಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯದ ಜೊತೆಗೆ ಬದುಕುವ ಹಕ್ಕುಗಳು ಮರೀಚಿಕೆಯಾಗಿದೆ. ನಿತ್ಯ ನರಕದಲ್ಲಿ ಬದುಕುವ ಇಲ್ಲಿಯ ಶೋಷಿತ ಸಮುದಾಯ ಹಾಗೂ ಕೃಷಿ ಕಾರ್ಮಿಕರಿಗೆ ಕೂಡಲೇ ಮೂಲಭೂತ ಸೌಲಭ್ಯ ಗಳು, ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಚರಂಡಿಗಳ ನಿರ್ಮಾಣ ಮಾಡಬೇಕೆಂದು ಗ್ರಾಮ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಸರ್ಕಾರ ಆದೇಶಿಸಬೇಕೆಂದು ಸವಳ ಕ್ಯಾಂಪಿನ ನಾಗರೀಕರು ಪಾದಯಾತ್ರೆಯೊಂದಿಗೆ ಸರ್ಕಾರಕ್ಕೆ ಮತ್ತೊಮ್ಮೆ ವಿನಂತಿಸಿಕೊಂಡರು.
ಪಾದಯಾತ್ರೆಯಲ್ಲಿ ಸವಳಕ್ಯಾಂಪಿನ ಜನರು, ಕೃಷಿ ಕಾರ್ಮಿಕರು ಹಾಗೂ ಕೆಜಿಎಲ್‌ಯು ಉಪಾಧ್ಯಕ್ಷ  ಮಹ್ಮದ್ ರಫಿ, ಪ್ರಗತಿಪರ ವಾಲ್‌ಪೇಂಟರ್ ಸಂಘದ ಕಾರ್ಯದರ್ಶಿಯಾದ ದೌಲ್‌ಸಾಬ್, ಬಾಷಾ, ಇಟ್ಟಂಗಿ ಭಟ್ಟಿ ಕಾರ್ಮಿಕರ ಸಂಘದ ಮಾಬುಸಾಬ್, ದ್ಯಾಮಣ್ಣ, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಬಸನಗೌಡ ಸುಳೇಕಲ್, ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಘವೇಂದ್ರ, ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Please follow and like us:
error