fbpx

ನವಭಾರತದ ನಿರ್ಮಾಣಕ್ಕೆ ನೆಹರೂ ಅವರ ಕೊಡುಗೆ ಅಪಾರ- ಕೃಷ್ಣ ಉದಪುಡಿ.

ಕೊಪ್ಪಳ, ನ.೨೩ (ಕ ವಾ) ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಭಾರತದ ಸಮಗ್ರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಮೂಲಕ ನವಭಾರತದ ನಿರ್ಮಾಣಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ೧೨೫ನೇ ಜನ್ಮ ವರ್ಷಾಚರಣೆ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ವಿಚಾರಸಂಕಿರಣದಲ್ಲಿ ನೆಹರೂ ಕುರಿತ ಮಡಿಕೆ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
     ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸುಮಾರು ಹದಿನೇಳು ವರ್ಷಗಳ ಕಾಲ ಪ್ರಧಾನಿಯಾಗಿ ಯಶಸ್ವಿ ಆಡಳಿತ ನಡೆಸಿದ್ದು, ಭಾರತೀಯ ರಾಜಕಾರಣದಲ್ಲಿ ಅಪೂರ್ವ ಜನಪ್ರಿಯತೆ ಗಳಿಸಿದ್ದರು.  ಕೃಷಿ, ಕೈಗಾರಿಕೆ, ವಿಜ್ಞಾನ-ತಂತ್ರಜ್ಞಾನ ಹಾಗೂ ನೀರಾವರಿ ವಲಯಗಳಿಗೆ ಉತ್ತೇಜನ ನೀಡಿ, ಭಾರತದ ಭವಿಷ್ಯವನ್ನು ಭವ್ಯವಾಗಿ ರೂಪಿಸಲು ಶ್ರಮಿಸುವ ಮೂಲಕ ನವಭಾರತದ ನಿರ್ಮಾತೃ ಎನಿಸಿಕೊಂಡರು.  ಮುದ್ದು ಮಕ್ಕಳಿಗೆ ಚಾಚಾ ನೆಹರೂ ಎಂದೇ ಖ್ಯಾತಿ ಗಳಿಸಿದ ಇವರು, ಮಕ್ಕಳೇ ಮುಂದಿನ ನಾಯಕರು ಮತ್ತು ಪ್ರಜೆಗಳು, ಮಕ್ಕಳ ಶ್ರೇಯೋಭಿವೃದ್ಧಿಗೆ ಕಡ್ಡಾಯ ಶಿಕ್ಷಣ ಅಗತ್ಯವಾಗಿದ್ದು, ಸಂವಿಧಾನದಲ್ಲಿ ಕಡ್ಡಾಯ ಶಿಕ್ಷಣಕ್ಕೆ ಆಗಿನ ದಿನಗಳಲ್ಲೇ ನೀತಿ ರೂಪಿಸಿದರು.  ದೇಶದ ಸಮಗ್ರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ, ಕೃಷಿ, ಕೈಗಾರಿಕೆ, ಶಿಕ್ಷಣ, ವಿಜ್ಞಾನ ಮತ್ತು ನೀರಾವರಿ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರು.  ಇವರ ದೂರದೃಷ್ಟಿ ಯೋಜನೆಗಳಿಂದಲೇ ದೇಶದ ಎಲ್ಲ ರಾಜ್ಯಗಳು ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಯಿತು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
     ವಿಚಾರಸಂಕಿರಣದ ಉದ್ಘಾಟನೆ ನೆರವೇರಿಸಿದ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಮಾತನಾಡಿ, ಜವಾಹರಲಾಲ್ ನೆಹರೂರವರ ಜೀವನದ ಸಾಧನೆ, ಅವಿರತ ಪರಿಶ್ರಮ, ಅವರ ದೂರದೃಷ್ಟಿ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾಗಿದೆ ಎಂದರು.
     ನೆಹರೂರವರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಭುರಾಜ್ ನಾಯಕ್ ಅವರು ಮಾತನಾಡಿ, ಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದ ನೆಹರೂರವರು, ಮಕ್ಕಳನ್ನು ಮಾನವ ಲೋಕದ ಪುಷ್ಪಗಳು, ಮಕ್ಕಳ ಉನ್ನತಿ
     ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಸ್ವಾಗತಿಸಿ, ವಂದಿಸಿದರು.  ಬಸವರಾಜ್ ಕರುಗಲ್ ಅವರು ಕಾರ್ಯಕ್ರಮದ ನಿರೂಪಣೆಗೈದರು.   ಜವಾಹರಲಾಲ್ ನೆಹರೂ ಅವರ ಜೀವನ ಕುರಿತು ಕಿರು ಚಿತ್ರವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಯಲ್ಲಿಯೇ ದೇಶದ ಭವಿಷ್ಯ ಅಡಗಿದೆ ಎಂದು ನಂಬಿದ್ದವರು.  ವಿಜ್ಞಾನ-ತಂತ್ರಜ್ಞಾನದ ಅಭಿವೃದ್ಧಿ ಇಲ್ಲದೆ ದೇಶಕ್ಕೆ ಮಾನ್ಯತೆ ಇಲ್ಲ.  ಬಡತನ, ಅಜ್ಞಾನ ಮತ್ತು ಅನಕ್ಷರತೆ ದೇಶದ ಪ್ರಮುಖ ಶತ್ರುಗಳೆಂದು ತಮ್ಮ ಮಾತುಗಳಲ್ಲಿ ಬಿಂಬಿಸುತ್ತಿದ್ದರು.  ತಮ್ಮ ಆಡಳಿತಾವಧಿಯಲ್ಲಿ ದೇಶ-ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮಿಸಿದರು.  ಎರಡನೆ ಜಾಗತಿಕ ಯುದ್ಧದ ನಂತರ ಅಲಿಪ್ತ ನೀತಿಯನ್ನು ಅನುಸರಿಸುವ ಮೂಲಕ ಭಾರತದ ಸಾರ್ವಭೌಮತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದರು.  ಆಗಿನ ಕಾಲದಲ್ಲಿಯೇ ಸಂಭವಿಸಬೇಕಾಗಿದ್ದ ಮೂರನೇ ಮಹಾ ಯುದ್ಧವನ್ನು ತಪ್ಪಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲಬೇಕು ಎಂದರು.

Please follow and like us:
error

Leave a Reply

error: Content is protected !!