ಗೌರಿ-ಗಣೇಶ ಹಬ್ಬ : ಮದ್ಯಪಾನ ನಿಷೇಧಾಜ್ಞೆ ಜಾರಿ

ಕೊಪ್ಪಳ ಸೆ. ೦೨ (ಕ.ವಾ.): ಜಿಲ್ಲೆಯಲ್ಲಿ ಸೆ. ೫ ರವರೆಗೆ ಆಚರಿಸಲಾಗುವ ಗೌರಿ-ಗಣೇಶ ಹಬ್ಬದ ಪ್ರಯುಕ್ತ, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅನುಕೂಲವಾಗುವಂತೆ  ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಜಾರಿಗೊಳಿಸಿದ್ದಾರೆ. 
  ನಿಷೇಧಾಜ್ಞೆಯನ್ವಯ ಕೊಪ್ಪಳ ಜಿಲ್ಲೆಯಾದ್ಯಂತ ಸೆ. ೦೪ ರಂದು ರಾತ್ರಿ ೯ ಗಂಟೆಯಿಂದ ಸೆ. ೦೬ ರ ಬೆಳಿಗ್ಗೆ ೦೬ ಗಂಟೆಯವರೆಗೆ, ಮುನಿರಾಬಾದ್, ಗಂಗಾವತಿ ನಗರ ಹಾಗೂ ಸುತ್ತಲಿನ ೧೦ ಕಿ.ಮೀ. ವ್ಯಾಪ್ತಿಯಲ್ಲಿ ಸೆ. ೦೬ ರ ರಾತ್ರಿ ೯ ಗಂಟೆಯಿಂದ ಸೆ. ೦೮ ರಂದು ಬೆಳಿಗ್ಗೆ ೦೬ ಗಂಟೆಯವರೆಗೆ ಮತ್ತು  ಸೆ. ೮ ರಂದು ರಾತ್ರಿ ೯ ರಿಂದ ಸೆ. ೧೦ ರಂದು ಬೆಳಿಗ್ಗೆ ೬ ಗಂಟೆಯವರೆಗೆ ಎಲ್ಲಾ ವೈನ್‌ಶಾಪ್, ಬಾರ್‌ಗಳು ಹಾಗೂ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಎಲ್ಲಾ ತರಹದ ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
Please follow and like us:
error