ರೈತರ ಅಂಗಳದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಘಟಕದಿಂದ ರಾತ್ರಿ ಕೃಷಿ ಪಾಠ ಶಾಲೆ

ಕೊಪ್ಪಳ ಡಿ.  ಕೊಪ್ಪಳದ ಜಿಲ್ಲೆಯ ರೈತರಿಗೆ ಕೃಷಿ ತಂತ್ರಜ್ಞಾನಗಳ ಮಾಹಿತ ಒದಗಿಸುವ ಹಾಗೂ ಅವರ ಕೃಷಿ ಅಭಿವೃದ್ದಿಗಾಗಿ ಕಾರ್ಯಾರಂಭಗೊಂಡಿರುವ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ರೈತರಿಗೆ ತರಬೇತಿಗಳನ್ನು ಹಾಗೂ ವಿಧಾನ ಪ್ತಾತ್ಯೆಕ್ಷಿಕೆಗಳನ್ನು ಕೈಗೊಳ್ಳುತ್ತಿದೆ. ವಿವಿಧ ತರಹದ ಆಧುನಿಕ ಕೃಷಿ ವಿಧಾನಗಳು ಹಾಗೂ ಅವುಗಳ ಪ್ರಾಯೋಗಿಕ ಪದ್ದತ್ತಿಗಳನ್ನು ತಿಳಿಸಲು ರೈತರಿಗೆ ಅನುಕೂಲವಾಗುವ ಹಾಗೆ ಅವರ ಗ್ರಾಮಗಳಲ್ಲಿಯೇ ಸಂಜೇವೆಳೆಗೆ ಕೃಷಿ ಪಾಠಶಾಲೆಗಳನ್ನು ಪ್ರಾರಂಭಿಸಿದೆ. ನಿಗದಿತ ದಿನದಂದು ಗ್ರಾಮದ ರೈತರಿಗೆ ತಮ್ಮ ಗ್ರಾಮದಲ್ಲಿ ಒಂದಡೆ ಸೇರುವಂತೆ ಸೂಚಿಸಿ ಅಂತಹ ದಿನದಂದು ಆ ಗ್ರಾಮದ ರೈತರಿಗೆ ಅವಶ್ಯಕವಾಗಿರುವ ವೈಜ್ಷಾನಿಕ ಕೃಷಿ ವಿಧಾನಗಳನ್ನು, ಸಸ್ಯ ಪೀಡೆಗಳ ನಿಯಂತ್ರಣದ ಮಾಹಿತಿಗಳನ್ನು ಮತ್ತು ತಾಂತ್ರಿಕತೆಯ ವಿಧಾನಗಳ ಬಗ್ಗೆ ತಿಳಿಹೇಳುವ ಸಭೆಗಳನ್ನು ಪ್ರಾರಂಭಿಸಿದೆ. ಈ ಸಭೆಗಳಲ್ಲಿ ರೈತರಿಗೆ ಕೃಷಿಯಲ್ಲಿ ಕಂಡುಬರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಸಾಮೂಹಿಕವಾಗಿ ಕೈಗೊಳ್ಳಬಹುದಾದ ಸಸ್ಯಸಂರಕ್ಷಣಾ ಕ್ರಮಗಳನ್ನು ಮತ್ತು ಇತರೆ ಕೃಷಿ ವಿಧಾನಗಳನ್ನು ತಿಳಿಸಲಾಗುವದು. ಈಗಾಗಲೆ ರೈತರಿಗೆ ಬೇಸಿಗೆ ಶೇಂಗಾ ಬೇಸಾಯದ ತರಬೇತಿಗಳನ್ನು ನೀಡುತ್ತಿದ್ದು ಬಿತ್ತನೇಯ ಬೀಜಕ್ಕೆ ಬೀಜೋಪಚಾರದ ಮಹತ್ವವನ್ನು ರೈತರಿಗೆ ತರಬೇತಿಗಳಲ್ಲಿ ಮನವರಿಕೆ ಮಾಡಲಾಗಿದೆ. 
ದಿನಾಂಕ ೦೧-೦೧-೨೦೧೧ ರಂದು ಸಂಜೆಯ ವೇಳೆ ಜಿಲ್ಲೆಯ ವದಗನಾಳ ಗ್ರಾಮದಲ್ಲಿ ಬೇಸಿಗೆ ಶೇಂಗಾ ಬಿತ್ತನೆಯ ಪೂರ್ವ ಅಗತ್ಯವಿರುವ ಜೈವಿಕ ಶಿಲೀಂದ್ರನಾಶಕ ಟ್ರೈಕೊಡರ್ಮಾದಿಂದ ಬೀಜೋಪಚಾರದ ವಿಧಾನವನ್ನು ರೈತರಿಗೆ ತಿಳಿಸಲಾಯಿತು. ಸುಮಾರು ೮೦ ಕ್ಕೂ ಹೆಚ್ಚು ರೈತರು ಈ ವಿಧಾನದ ಪ್ರಾತ್ಯೆಕ್ಷಿಕೆಯಲ್ಲಿ ಪಾಲ್ಗೊಂಡು ಈ ಪ್ರಾತ್ಯೆಕ್ಷಿಕೆಯ ಲಾಭ ಪಡೆದರು. ಅನೇಕರು ತಾವು ಬಿತ್ತಲು ಸಿದ್ದಪಡಿಸಿದ್ದ ಬೀಜಗಳಿಗೆ ಈ ಸಭೆಯಲ್ಲಿ ಬೀಜೋಪಚಾರ ಮಾಡಿಕೊಂಡರು. ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವಿಜ್ಞಾನಿಗಳಾದ ಡಾ: ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ ಶೇಂಗಾ ಬೆಳೆಯಲ್ಲಿ ಮಣ್ಣಿನಿಂದ ಹರಡಬಹುದಾದ ವಿವಿಧ ರೋಗಗಳು ಅವುಗಳ ಪಸರುವಿಕೆ ಮತ್ತು ರೋಗಗಳ ನಿಯಂತ್ರಣಕ್ಕೆ ಬೀಜೋಪಚಾರದಿಂದ ಹೆಗೆ ಪರಿಹಾರ ಕೈಗೊಳ್ಳಬಹುದೆಂದು ರೈತರಿಗೆ ತಿಳಿಸಿದರು. ಶ್ರೀ ಯೂಸೂಫಅಲಿ ನಿಂಬರಗಿಯವರು ಶೇಂಗಾ ಬೀಜಗಳಗೆ ಬೀಜೋಪಚಾರ ಮಾಡುವ ವಿಧಾನವನ್ನು ರೈತರಿಗೆ ಪ್ತಾತ್ಯೆಕ್ಷಿಕೆಮೂಲಕ ತಿಳಿಸಿದರು. ಈ ಸಭೆಯಲ್ಲಿ ಹಲವು ರೈತರು ತಾವು ಬೆಳೆದ ಗೋವಿನ ಜೋಳ ಹಾಗೂ ಹಿಂಗಾರಿ ಜೋಳದಲ್ಲಿ ಕಂಡುಕೊಂಡ ಸುಳಿ ನೊಣದ ಬಾಧೆ ಹಾಗೂ ಕುಡಿ ಸಾಯುವಿಕೆ ಬಾಧೆಗೊಳಗಾಗದ ಗಿಡಗಳನ್ನು ತಂದು ವಿಜ್ಞಾನಿಗಳೊಂದಿಗೆ ಚರ್ಚಿಸಿ ಸೂಕ್ತವಾದ ಸಿಂಪರಣಾ ಪರಿಹಾರಗಳನ್ನು ತಿಳಿದುಕೊಂಡರು. ಮುಂಬರುವ ದಿನಗಳಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ಹೆಚ್ಚು ಪ್ರದೇಶಗಳಲ್ಲಿ ವಿವಿಧ ಬೆಳೆಗಳಲ್ಲಿ ಕಂಡುಬರುವ ರೈತರ ಸಮಸ್ಯಗಳಿಗೆ ಸೂಕ್ತವಾದ ಪರಿಹಾರಗಳನ್ನು ನೀಡಲು ಗ್ರಾಮ ಸಭೆ ಹಾಗೂ ರೈತರ ಪಾಠ ಶಾಲೆಗಳನ್ನು ನಡೆಸಿ ಸೂಕ್ತವಾದ ಸಲಹೆಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಸಕ್ತ ಗ್ರಾಮಸ್ತರು ತಮ್ಮ ಗ್ರಾಮಗಳಲ್ಲಿ ಇಂತಹ ಸಭೆಗಳನ್ನು ನಡೆಸಲು ವಿಸ್ತರಣಾ ಶಿಕ್ಷಣ ಘಟಕಕ್ಕೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಚರ್ಚಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳದ ಕೃಷಿ ಶಿಕ್ಷಣ ವಿಸ್ತರಣಾ ಘಟಕ  ಕೋರಿದೆ. 
Please follow and like us:
error