ಮೋಟಾರ್ ಪಂಪ್ ಸೆಟ್ ವಿತರಣೆ.

ಶಾಸಕರಿಂದ ಅಲ್ಪಸಂಖ್ಯಾತರ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮೋಟಾರ್ ಪಂಪ್ ಸೆಟ್ ವಿತರಣೆ.
ಕೊಪ್ಪಳ,ಫೆ:೨೮ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ೨೦೧೪-೧೫ರ ಸಾಲಿನ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಜನರ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ೩೭ ಫಲಾನುಭವಿಗಳಿಗೆ ಮೋಟಾರ ಪಂಪ್ ಸೆಟ್ ವಿತರಣೆ ಮಾಡಿದರು. ಹಾಗೂ ೨೫೦ ಜನರಿಗೆ ಶ್ರಮಶಕ್ತಿ ಯೋಜನೆಯಡಿಯಲ್ಲಿ ತಲಾ ರೂ.೨೦ ಸಾವಿರ ಮತ್ತು ಮೈಕ್ರೋ ಸಾಲ ಯೋಜನೆಯಡಿಯಲ್ಲಿ ಮಹಿಳಾ ಗುಂಪಿನ ೧೮೦ ಜನರಿಗೆ ತಲಾ ೧೦ ಸಾವಿರದಂತೆ

ಸಾಲದ ಚಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಸನ್ನ ಗಡಾದ, ಗುಳಪ್ಪ ಹಲಗೇರಿ, ರಾಮಣ್ಣ ಕಲ್ಲಣ್ಣವರು, ಯಮನೂರಪ್ಪ ನಾಯಕ್, ಯಲ್ಲಪ್ಪ ಕಿತ್ತೂರು, ಅಲ್ಪಸಂಖ್ಯಾತರ ಜಿಲ್ಲಾ ವ್ಯವಸ್ಥಾಪಕರಾದ ಜಾಕೀರ್ ಹುಸ್ಸೇನ್ ಕುಕನೂರು ಉಪಸ್ಥಿತರಿದ್ದರು.  
Please follow and like us:
error