ಮಂಗಳುರು ಗ್ರಾಮಕ್ಕೆ ಶ್ರೀ ವಿಧ್ಯಾವಾರಿಧಿತೀರ್ಥ ಶ್ರೀಪಾದಂಗಳು.

ಕೊಪ್ಪಳ, ೧೨- ಯಲಬುರ್ಗಾ ತಾಲುಕಿನ ಮಂಗಳುರು ಗ್ರಾಮಕ್ಕೆ ಕಣ್ವಮಠದ ಮಠಾಧೀಶರಾದ ಶ್ರೀ ವಿಧ್ಯಾವಾರಿಧಿತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಇಂದು ೧೩ ರಂದು ಸೋಮವಾರ ಜರುಗಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರರಾವ ಸರನಾಳಗೌಡ್ರ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು ವೀರಘಟ ಹುಣಸಿಹೋಳೆಯ ಕಣ್ವಮಠದ ನೂತನ ಶ್ರೀಗಳು ಪ್ರಥಮ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇದೇ ೧೩ ಮತ್ತು ೧೪ ರಂದು ಪುರಪ್ರವೇಶ ಕಾರ್ಯಕ್ರಮ ಜರುಗಲಿದೆ. ೧೩ ರಂದು ಸೋಮವರ ಸಂಜೆ ೫:೩೦ಕ್ಕೆ ಶ್ರೀಗಳು ಗ್ರಾಮಕ್ಕೆ ಆಗಮಿಸಲಿದ್ದು. ಗ್ರಾಮದ ಹಳೆ ಬಸ್ ನಿಲ್ದಾಣದಿಂದ ಮೆರವಣಿಗೆ ಮುಖಾಂತರ ಕರೆತಂದು ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ನಂತರ ಶ್ರೀಮಂಗಳೇಶ್ವರ ದೇವಸ್ಥಾನದಲ್ಲಿ ಶ್ರೀಗಳಿಂದ ಆಶಿರ್ವಚನ ಜರುಗಲಿದೆ. ೧೪ ರಂದು ಬೆಳಿಗ್ಗೆ ಶ್ರೀಗ ಳಿಂದ ಸಂಸ್ಥಾನ ಪೀಠ ಪೂಜೆ ಭೀಕ್ಷೆ ನಂತರ ತೀರ್ಥ ಪ್ರಸಾದ ಜರುಗಲಿದ್ದು ಜಿಲ್ಲೆಯ ವಿಪ್ರಸಮಾಜ ಬಾಂದವರು ಸೇರಿದಂತೆ ಸರ್ವರು ಆಗಮಿಸಿ ಯಶಸ್ವಿ ಗೋಳಿಸುವಂತೆ  ಕೋರಿದ್ದಾರೆ.
Please follow and like us:

Related posts

Leave a Comment