fbpx

ಹೈನುಗಾರಿಕೆ ಸಹಾಯಧನಕ್ಕಾಗಿ ಒತ್ತಾಯಿಸಿ ಬಸಾಪಟ್ಟಣ ಗ್ರಾಮ ಪಂಚಾಯಿತಿ ಮುಂದೆ ಧರಣಿ.

ಬಸಾಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಸದೇ ಅಧಿಕಾರಿಗಳು ತಾವೇ ಒಂದು ಪಟ್ಟಿಯನ್ನು ತಯಾರಿಸಿದ್ದನ್ನು ವಿರೋಧಿಸಿ ಜನರು ಹೋರಾಡಿದಾಗ ಕೂಡಲೇ ಪಂಚಾಯಿತಿ ಅಧಿಕಾರಿಗಳು ಗ್ರಾಮ ಸಭೆ ನಡೆಸಿದರು. ಆ ಸಭೆಯಲ್ಲಿ ೬೪ ಜನ ಫಲಾನುಭವಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಲಾಟರಿ ಮೂಲಕ ೨೪ ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಅಧಿಕಾರಿಗಳು ಆಯ್ಕೆಯಾದವರಿಗೆ ಸಹಾಯಧನ ಕೊಡದೇ ಅನಧಿಕೃತವಾಗಿ ತಯಾರಿಸಿದ ಪಟ್ಟಿಯಲ್ಲಿರುವವರಿಗೆ ಸಹಾಯಧನ ನೀಡುತ್ತಿರುವುದನ್ನು ವಿರೋಧಿಸಿ ಸುಮಾರು ೭೦ ಜನ ಬಸಾಪಟ್ಟಣ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ನಡೆಸಿ, ಪಿಡಿಓ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಚಳುವಳಿಯಲ್ಲಿ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್, ಆಯ್ಯಾರ್‍ಲಾ ಜಿಲ್ಲಾ ಸಂಚಾಲಕ ಎಂ. ಏಸಪ್ಪ, ಇಟ್ಟಂಗಿ ತಯಾರಕರ ಸಂಘದ ಅಧ್ಯಕ್ಷ ಮಾಬುಸಾಬ್, ವೆಂಕಟೇಶ, ರೇಣಶ, ತಿಪ್ಪೇಸ್ವಾಮಿ, ಈರಮ್ಮ, ಹುಲಿಗೆಮ್ಮ, ತಿಪ್ಪಮ್ಮ ಇವರ ನೇತೃತ್ವದಲ್ಲಿ ಫಲಾನುಭವಿಗಳು ಪಾಲ್ಗೊಂಡಿದ್ದರು.

Please follow and like us:
error

Leave a Reply

error: Content is protected !!