ಕಾಳಿದಾಸ ಪ್ರೌಢ ಶಾಲೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವೀರಗ್ರಹಣಿ ಪ್ರಶಸ್ತಿ ಪ್ರಧಾನ ಸಮಾರಂಭ.

ಇತ್ತೀಚಿಗೆ ನಡೆದ ಪೂರ್ವ ವಲಯದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಒಟ್ಟು ೭೧ ಪ್ರಶಸ್ತಿಗಳನ್ನು ಪಡೆದು ಅತ್ಯುತ್ತಮ ಸಾಧನೆಗೈದಿದ್ದಾರೆ. ಬಾಲಕರ & ಬಾಲಕಿಯರ ವಿಭಾಗದ ಕಬಡ್ಡಿ ಮತ್ತು ಖೋ-ಖೋ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಹಾಗೂ ಸಂತೋಷದ ವಿಷಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಅಂಗಡಿಯವರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಗವಿಸಿದ್ದಪ್ಪ ಹಿಟ್ನಾಳರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಪ್ರಶಸ್ತಿ
    ಈ ಸಂದರ್ಭದಲ್ಲಿ ಅತಿಥಿಗಳಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಮುರಳಿಧರ ಹಾಗೂ ಶ್ರೀ ಸುರೇಂದ್ರರವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಶ್ರೀ ಎಸ್.ಎಸ್. ಗುರುವಿನ್, ಪ್ರಾಚಾರ್ಯರಾದ ಶ್ರೀ ನಾಗನಗೌಡ ಜುಮ್ಮಣ್ಣನವರು, ಹಾಗೂ ಶಿಕ್ಷಕ ಸಿಬ್ಬಂದಿ ಉಪನ್ಯಾಸ ವರ್ಗದವರು ಉಪಸ್ಥಿತರಿದ್ದರು.

ಪತ್ರಗಳನ್ನು ಪ್ರಧಾನ ಮಾಡಿದರು.

Please follow and like us:
error