ಗಾಂಧೀಜಿ ಜಯಂತಿ ಅ. ೦೨ ರಂದು ಪ್ರಾಣಿ ಬಲಿ ಹಾಗೂ ಮದ್ಯ ಮಾರಾಟ ನಿಷೇಧ.

 ಕೊಪ್ಪಳ ಅ. ೦೧ (ಕ ವಾ) ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆ ಅಂಗವಾಗಿ ಅವರ ತತ್ವಗಳನ್ನು ಪಾಲಿಸುವ ದೃಷ್ಟಿಯಿಂದ ಅ. ೦೨ ರಂದು ಜಿಲ್ಲೆಯಾದ್ಯಂತ ಪ್ರಾಣಿ ಬಲಿ ನಿಷೇಧ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ್ ಜಿ.ಎಲ್. ಅವರು ಆದೇಶ ಹೊರಡಿಸಿದ್ದಾರೆ.
     ನಿಷೇಧಾಜ್ಞೆ ಅನ್ವಯ, ಅ. ೦೨ ರಂದು ಬೆಳಿಗ್ಗೆ ೬ ಗಂಟೆಯಿಂದ ಅ. ೦೩ ರಂದು ಬೆ. ೦೬ ಗಂಟೆಯವರೆಗೆ ಜಿಲ್ಲೆಯ ಎಲ್ಲಾ ವಧಾಗಾರಗಳಲ್ಲಿ ಮತ್ತು ಮಾಂಸ ಮಾರಾಟ ಸ್ಥಳಗಳಲ್ಲಿ ಕರ್ನಾಟಕ ಪ್ರಿವೆನ್ಷನ್ ಆಫ್ ಅನಿಮಲ್ ಆಂಡ್ ಬರ್ಡ್ ಸ್ಯಾಕ್ರಿಫೈಸ್ ಆಕ್ಟ್ ೧೯೫೯ ರ ನಿಯಮ ೩,೪ ಮತ್ತು ೫ ರ ಪ್ರಕಾರ ಪ್ರಾಣಿ ವಧೆಯನ್ನು ನಿಷೇಧಿಸಿದೆ.  ಅಲ್ಲದೆ ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿದ್ದು ಜಿಲ್ಲೆಯ ಎಲ್ಲ ವೈನ್‌ಶಾಪ್, ಬಾರ್‌ಗಳು ಹಾಗೂ ಸಗಟು ಮದ್ಯ ಮಾರಾಟ ಜೊತೆಗೆ ಎಲ್ಲ ತರಹದ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶದಲ್ಲಿ ತಿಳಿಸಲಾಗಿದೆ.
Please follow and like us:
error