fbpx

ಬನ್ನಿಕಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕ ಮಟ್ಟಕ್ಕೆ ಆಯ್ಕೆ

 ಸೆ ೦೪ ಇತ್ತೀಚಿಗೆ ಕೊಪ್ಪಳ ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ನಗರದ ಬನ್ನಿಕಟ್ಟಿ ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳು ವಿವಧ ಕ್ರಿಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.
೯ನೇ ತರಗತಿ ವಿದ್ಯಾರ್ಥಿ ನಾಗಪ್ಪ ಕಬ್ಬೆರ, ಉದ್ದ ಜಿಗಿತದಲ್ಲಿ ದ್ವಿತಿಯ, ತ್ರಿವಿದ ಜಿಗಿತದಲ್ಲಿ ಪ್ರಥಮ, ೧೦೦ಮೀ ಓಟದಲ್ಲಿ ತೃತಿಯ ಸ್ಥಾನ ಪಡೆದಿದ್ದಾನೆ. ವಸಂತ ೧೫೦೦ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಹುಮಾನಗಳನ್ನು ಪಡೆದು ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ಸು ಪಡೆದು ಶಾಲೆಗೆ ಕಿರ್ತಿ ತಂದಿದ್ದಾಕ್ಕಾಗಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಪರಮಾನಂದ ಯಾಳಗಿ ಮತ್ತು ಸದಸ್ಯರು, ಶಾಲೆಯ ಮುಖ್ಯಗುರುಗಳಾದ ತಾಹೇರಾಬೇಗಂ ದೈಹಿಕ ಶಿಕ್ಷಕಿ ಶೋಭಾ ಗಢಾದ  ಮತ್ತು ಶಾಲಾ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿದ್ದಾರೆ ಎಂದು ಚಿತ್ರಕಲಾ ಶಿಕ್ಷ ವೀರಯ್ಯ ಒಂಟಿಗೊಡಿಮಠ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!