ಜನರ ಸಹಕಾರದೊಂದಿಗೆ ರೆಡ್‌ಕ್ರಾಸ್‌ನಿಂದ ಸಾಮೂಹಿಕ ಸೇವೆ-ದೇಶಪಾಂಡೆ


ಅವರು ತಾಲೂಕಿನ ಬೇಳೂರ ಗ್ರಾಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧ ವಿತರಣಾ ಶಿಬಿರ ಉದ್ದೇಶಿಸಿ ಮಾತನಾಡುತ್ತಿದ್ದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳದಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭಿಸಿದ್ದು, ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಉಚಿತ ಔಷಧಿ ವಿತರಣೆ ಮತ್ತು ಅಂಗವಿಕಲರ ಸಲಹರಣೆ ವಿತರಣೆ ಸೇರಿದಂತೆ ಹಲವಾರ ಸಾಮಾಜಿಕ ಕೆಲಸಗಳಲ್ಲಿ ತೊಡಗಿದೆ ಎಂದರು.
ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧದ ವಿತರಣೆ ಶಿಬಿರ ಏರ್ಪಡಿಸಿದ್ದು, ಗ್ರಾಮಸ್ಥರು ಇದರ ಸದುಪಯೋಗಪಡೆದುಕೊಂಡು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ರೋಗದಿಂದ ದೂರ ಇರುವಂತೆ ಸಲಹೆ ನೀಡಿದರು.
ಬೇಳೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಕ್ತದಾನ ಶಿಬಿರ ಮಾಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ತಾ.ಪಂ. ಸದಸ್ಯ ಮುದೇಗೌಡ ಪಾಟೀಲ್, ಗ್ರಾ.ಪಂ. ಸದಸ್ಯರಾದ ರಾಮಣ್ಣ ಚೆಲ್ಲಾ, ಬಸವರಾಜ ಕೊಪ್ಪಳ, ಇಮಾಮ್‌ಸಾಬ ಹಾಗೂ ಗ್ರಾಮದ ಪ್ರಮುಖರಾದ ವೆಂಕಣ್ಣ ಜೆಲ್ಲಾ, ಡಾ|| ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು ೨೦೦ ರೋಗಿಗಳನ್ನು ಪರಿಶೀಲಿಸಿ ಉಚಿತ ಔಷಧ ನೀಡಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ, ಉಪಾಧ್ಯಕ್ಷ ಡಾ|| ಸಿ.ಎಸ್. ಕರಮುಡಿ, ಖಜಾಂಚಿ ಸುದೀರ್ ಅವರಾಧಿ ಚಿಕಿತ್ಸೆ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ವೀರಣ್ಣ ಕಮತಾರ, ಬಸವರಾಜ ವಡಿಗೇರಿ, ಎ.ಜಿ. ಶರಣಪ್ಪ ಚಕ್ರಕಾಶಿ ಮತ್ತಿತರರು ಭಾಗವಹಿಸಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪ್ರತಿ ಮನುಷ್ಯ ಕಷ್ಟಗಳಲ್ಲಿ ಭಾಗಿಯಾಗುವ ಮಹಾದಾಸೆ ಹೊಂದಿದ್ದು, ಜನರ ಸಹಕಾರದೊಂದಿಗೆ ಸಾಮೂಹಿಕ ಸೇವೆಯಲ್ಲಿ ತೊಡಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಸಂತೋಷ ದೇಶಪಾಂಡೆ ಹೇಳಿದರು.

Please follow and like us:
error