fbpx

ಸಕಾಲಕ್ಕೆ ವೇತನ ಪಾವತಿ; ಡಿ.ಡಿ.ಪಿ.ಐ ಭರವಸೆ

ಕೊಪ್ಪಳ: ಕೊಪ್ಪಳ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಸಕಾಲಕ್ಕೆ ಪಾವತಿಯಾಗುವಂತೆ ನೋಡಿಕೊಳ್ಳುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ಯಾಮಸುಂದರ ಭರವಸೆ ನೀಡಿದರು. 
ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವೇತನ ವಿಳಂಬ ವಿರೋಧಿಸಿ ಹಮ್ಮಿಕೊಂಡಿದ್ದ ಸಾಂಕೇತಿಕ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದರು. 
ಶಿಕ್ಷಕರ ಸಂಘದ ಮುಖಂಡರಾದ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಮಾತನಾಡಿ, ಈಗಾಗಲೇ ಹಲವುಬಾರಿ ಅಧಿಕಾರಿಗಳಿಗೆ ವೇತನ ಕುರಿತು ಸೌಜನ್ಯಯುತವಾಗಿ ಮನವಿ ಮಾಡಿಕೊಂಡರೂ, ಇದುವರೆಗೂ ವೇತನ ನಿಗದಿತ ದಿನಕ್ಕೆ ಪಾವತಿಯಾಗುತ್ತಿಲ್ಲ. ಆದ್ದರಿಂದ ಇಂದು ಸಾಂಕೇತಿಕ ಧರಣಿ ಕೈಗೊಂಡಿದ್ದೇವೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಯಾಗದಂತೆ ಧರಣಿ ಮಾಡಿದ್ದೇವೆ. ಇದನ್ನು ಅಧಿಕಾರಿ ವರ್ಗದವರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ದಿನಮಾನದಲ್ಲಿ ಸಕಾಲಕ್ಕೆ ವೇತನ ಆಗದಿದ್ದ ಪಕ್ಷದಲ್ಲಿ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಿ ಅನಿರ್ಧಿಷ್ಟಾವಧಿಯವರೆಗೆ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು. 
ಅಲ್ಲದೇ ಈಗಾಗಲೇ ಜಾತಿ ಗಣಿತಿ ಮಾಡಲು ಸರಕಾರ ಆದೇಶ ಮಾಡಿದ್ದು ಶಿಕ್ಷಕರು ಒಂದು ಸುತ್ತಿನ ತರಬೇತಿಯನ್ನು ಪಡೆದಿದ್ದಾರೆ. ಶಿಕ್ಷಕರ ಬಾಕಿ ವೇತನ ಪಾವತಿಯಾಗದಿದ್ದರೆ ಗಣತಿ ಕಾರ್ಯವನ್ನು ಸ್ಥಗಿತ ಗೊಳಿಸುತ್ತೇವೆ ಎಂದು ಹೇಳಿದರು.
ಧರಣಿ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶರಣೇಗೌಡ, ತಾಲೂಕ ಅಧ್ಯಕ್ಷ ಸುರೇಶ ಅರಕೇರಿ, ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಪೂಜಾರ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಬಿ, ಪೂರ್ಣಿಮಾ, ಶರಣಮ್ಮ ಪಾಟೀಲ, ಹೊಳಿಬಸಯ್ಯ, ಪರಸಪ್ಪ ಕಂಬಳಿ, ಬಸವಾರಾಜ ಕೆ, ಸಿದ್ದು ಕೆರೆ ಮತ್ತು ಹಲವಾರು ಶಿಕ್ಷಕರು ಪಾಲ್ಗೊಂಡಿದ್ದರು. 
Please follow and like us:
error

Leave a Reply

error: Content is protected !!