ಒಳ್ಳೆಯ ಸನ್ನಿವೇಷಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕೆ.ಎಂ.ಸಯ್ಯದ್

ನಾಟಕದಲ್ಲಿ ಬರುವಂತಹ ಒಳ್ಳೆಯ ಸನ್ನಿವೇಷಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಕೆ.ಎಂ.ಸಯ್ಯದ್
ಕೊಪ್ಪಳ: ಏ೦೩: ಈ ಜೀವನವೇ ಒಂದು ನಾಟಕರಂಗ ನಾವೆಲ್ಲ ಪಾತ್ರಧಾರಿಗಳು, ಸೂತ್ರಧಾರಿ ಮೇಲೊಬ್ಬನಿದ್ದಾನೆ, ಈ ನಾಟಕದಲ್ಲಿ ಬರುವಂತಹ ಕೆಟ್ಟ ಸನ್ನಿವೇಶಗಳನ್ನು ಬಿಟ್ಟು ಒಳ್ಳೆಯ ಪಾತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಾಂಗ್ರೇಸ್ ಮುಖಂಡ ಹಾಗೂ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಹೇಳಿದರು. 
ಅವರು ತಾಲೂಕಿನ ಮೋರನಾಳ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಾರುತೇಶ್ವರ ನಾಟ್ಯಸಂಘದಿಂದ ಏರ್ಪಡಿಸಿದ ದಿಲ್ಲಿಗೆ ಹೊಕ್ಕ ಪುಂಡ ಹುಲಿ ಎಂಬ ಸುಂದರ ಸಾಮಾಜಿಕ ನಾಟಕದ  ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಈ ಭೂಮಿಯ ಮೇಲೆ ನಾವು ಎಷ್ಟು ದಿನ ಇದ್ದೇವೆ ಅನ್ನೋದು ಮುಖ್ಯವಲ್ಲ ಏನು ಮಾಡಿದ್ದೇವೆ ಅನ್ನೋದು ಮುಖ್ಯ ಎಂದರು. 
ಮುಂದುವರೆದು ಮಾತನಾಡಿದ ಅವರು ಡಾ// ರಾಜಕುಮಾರ , ಉಮಾಶ್ರೀ , ಇನ್ನು ಅನೇಕ ಕಲಾವಿದರು ಈ ನಾಟಕರಂಗದಿಂದಲೇ ಬಂದವರೆಂದರು. ಒಂದು ನಾಟಕವನ್ನಾಡಿಸಲು ಸುಮಾರು ಒಂದು ಲಕ್ಷದವರೆಗೆ ಖರ್ಚಾಗುತ್ತೆ, ಈ ಹಿಂದೆ ಸರಕಾರದವತಿಯಿಂದ ನಾಟಕಕ್ಕೆ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ಧನಸಹಾಯದ ರೂಪವಾಗಿ ಕೊಡುವ ವಾಡಿಕೆವಿತ್ತು , ಆದ್ದರಿಂದ ಮುಂದಿನ ದಿನಮಾನಗಳಲ್ಲಿ ಈ ವಿಷಯವನ್ನು ಶಾಸಕರ ಗಮನಕ್ಕೆ ತರುತ್ತೇನೆ ಎಂದು ಕಾಂಗ್ರೇಸ್ ಮುಖಂಡ ಹಾಗೂ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್ ಹೇಳಿದರು. 
ಈ ಸಂಧರ್ಭದಲ್ಲಿ ಎಪಿಎಂಸಿ ಸದಸ್ಯರಾದ ಹನುಮರೆಡ್ಡಿ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕಾಳಮ್ಮ ಅಡಿವೆಪ್ಪ ಕಲ್ಲಳ್ಳಿ , ಹಟ್ಟಿ ಭರಮಪ್ಪ , ಶರಣಪ್ಪ ಸಜ್ಜನ , ತೋಟಪ್ಪ ಹಟ್ಟಿ , ಬಸಣ್ಣ ಬಂಗಾಳಿ , ಚಂದ್ರಪ್ಪ ಹುಳ್ಳಿ , ದೇವಪ್ಪ ಮಾಗಳದ್ , ಮಲ್ಲಮ್ಮ ಹೊಸಪೇಟೆ , ಯಲ್ಲಪ್ಪ ದಳಪತಿ , ಯುವ ಸಾಹಿತಿ ಎಂ.ಎಸ್.ಮುಲ್ಲಾ ಹನುಮಸಾಗರ ಇನ್ನು ಹಲವರು ಸೇರಿದಂತೆ ಗ್ರಾಮದ ವಿವಿಧ ಸಂಘಟನೆಗಳ ಪಧಾಧಿಕಾರಿಗಳು, ಕಾಂಗ್ರೇಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

Related posts

Leave a Comment