ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ – ಉಮೇಶ ಪೂಜಾರ

ಕೊಪ್ಪಳ : ೧೦ ನೇ ತರಗತಿ ವಾರ್ಷಿಕ ಪರಿಕ್ಷಾ ಫಲಿತಾಂಶ ಸುದಾರಣೆಗಾಗಿ ವಿದ್ಯಾರ್ಥಿಗಳಿಗೆ  ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಕರ್ನಾಟಕ ರಾಜ್ಯ ಪ್ರೌಢಶಾಲಾ ಪರೀಕ್ಷಾ ಮಂಡಳಿ ಬೆಂಗಳೂರ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಭವನ ಕೊಪ್ಪಳದಲ್ಲಿ ನೇರಸಂವಾದ ಕಾರ್ಯಕ್ರಮ ಜರುಗಿತು. 
ಸದರಿ ಕಾರ್ಯಕ್ರಮದಲ್ಲಿ ೧೫೦೦ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಧ್ಯಕ್ಷತೆಯನ್ನು ಉಮೇಶ ಪೂಜಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಹಿಸಿದ್ದರು. ಚೇತನರಾಮ್ ರಾಮ್ ಪರಿವರ್ತನ ಟ್ರಸ್ಟ ಮೈಸೂರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಸೋಮಶೇಖರ ಚ ಹರ್ತಿ ಶಿಕ್ಷಣ ಸಂಯೋಜಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಕೆ. ಸಮನ್ವಯಾಧಿಕಾರಿಗಳು ಕೊಪ್ಪಳ, ನಾಗಪ್ಪ ಹಾಸಪಲ್ಲಿ ಕೊಪ್ಪಳ ಉಪಸ್ಥಿತರಿದ್ದರು, ಉಮೇಶ ಪೂಜಾರ ಮಾತನಾಡಿ ಅಧ್ಯಯನ ಒಂದು ಕಲೆ ಅದನ್ನು ಅಳವಡಿಸಿಕೊಂಡರೆ ಪರೀಕ್ಷೆಗೊಂದು ಬೆಲೆ ಬರುತ್ತದೆ. ಓದಿನಲ್ಲಿ ಶಿಸ್ತು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಚೇತನರಾಮ್ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಓದು, ಏಕೆ, ಏನು, ಹೇಗೆ? ಅಧ್ಯಯನ ಸೂತ್ರಗಳು ಪರೀಕ್ಷೆಯ ನಿರಿಕ್ಷೆ, ಏಕಾಗ್ರತೆ ಜಾದೂ, ನೆನಪೆಂಬ ಮಾಯೆ, ಮೆದುಳಿನ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಬಾಲಕರ/ಬಾಲಕಿಯರ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ ಕೊಪ್ಪಳ, ಭಾಗ್ಯನಗರ, ಕಿನ್ನಾಳ, ಗಿಣಗೇರಿ, ಲೇಬಗೇರಿ, ಹೊರತಟ್ಟನಾಳ, ಬನ್ನಿಕಟ್ಟಿ ಕೊಪ್ಪಳ, ಗವಿಸಿದ್ದೇಶ್ವರ ಪ್ರೌಢಶಾಲೆ ಕೊಪ್ಪಳ, ಕುವೆಂಪು/ಕಾಳಿದಾಸ ಪ್ರೌಢಶಾಲೆಗಳ ಸುಮಾರು ೧೫೦೦ ವಿದ್ಯಾರ್ಥಿಗಳು ನೇರ ಸಂವಾದ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು. ಚನ್ನಬಸಪ್ಪ ಹಮ್ಗಿ, ಸ್ವಾಗತಿಸಿದರು. ಸಾದಾಶಿವ  ಪಾಟೀಲ ಸಂಗೀತ ಶಿಕ್ಷಕರು ನಾಡಗೀತೆ ಗೈದರು. ಸೋಮಶೇಖರ ಹರ್ತಿ ನಿರೂಪಿಸಿದರು. ಮೈಳಾರಪ್ಪ ಕುರಿ ವಂದಿಸಿದರು. ಎಂದು ಪತ್ರಿಕಾ ಪ್ರಕಟಣೆಗೆ ಸೋಮಶೇಖರ ಹರ್ತಿ ಶಿಕ್ಷಣ ಸಂಯೋಜಕರು ಬಿಇಓ ಆಪೀಸ್ ಕೊಪ್ಪಳ, ೭೪೧೧೮೫೬೬೦೨, 

Leave a Reply