ಶ್ರೀಘ್ರದಲ್ಲೇ ಹೊಸ ಪಕ್ಷ ರಚನೆ: ಯಡಿಯೂರಪ್ಪ

ಚಿಕ್ಕಮಗಳೂರು, ಅ.3: ಸಂಸದ ಅನಂತ್ ಕುಮಾರ್ ಹಾಗೂ ಪಕ್ಷದ ಮುಖಂಡರ ಪಿತೂರಿಯಿಂದ ತಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಯಿತು. ಹಾಗಾಗಿ ತಾನು ಪಕ್ಷ ತೊರೆಯುವ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಹೊಸ ಪಕ್ಷ ಕಟ್ಟಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ತನ್ನ ಮೂಗಿಗೆ ತುಪ್ಪ ಸವರಿ ಮೋಸ ಮಾಡಿದೆ. ತಾನಿನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷನಾಗಲಿ, ಮುಖ್ಯಮಂತ್ರಿ ಆಗೋದು ಮುಗಿದ ಅಧ್ಯಾಯ. ಆದುದರಿಂದ ತಾನು ಹೊಸ ಪಕ್ಷ ಕಟ್ಟುವ ಆಲೋಚನೆ ಮಾಡಿದ್ದೇನೆ. ಬಿಜೆಪಿಗೆ ಸದ್ಯದಲ್ಲಿಯೇ ವಿದಾಯ ಹೇಳಲಿದ್ದೇನೆ ಎಂದು ನುಡಿದರು.
ತಾನು ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಸೇರವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಶೀಘ್ರದಲ್ಲೇ ಹೊಸ ಪಕ್ಷ ಕಟ್ಟಲಿದ್ದು, ಅಲ್ಲಿಯವರೆಗೂ ತನ್ನ ಬೆಂಬಲಿಗರು, ಆಪ್ತರು ಬಿಜೆಪಿಯಲ್ಲೇ ಇರಿ ಎಂಬ ಸಲಹೆ ನೀಡಿದ ಯಡಿಯೂರಪ್ಪ, ಪಕ್ಷ ಕಟ್ಟಿದ ಮೇಲೆ ಎಲ್ಲರಿಗೂ ಮುಕ್ತ ಅವಕಾಶ ನೀಡುವುದಾಗಿ ಘೋಷಿಸಿದರು.

Leave a Reply