ಶಿಕ್ಷಕರ ದಿನಾಚರಣೆ ನಿಮಿತ್ಯ:ಶಿಕ್ಷಕರಿಗೆ ಆಟೋಟ ಸ್ಪರ್ಧೆ

ಕೊಪ್ಪಳ: ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ಯ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು.ಶಿಕ್ಷಕರಿಗೆ ಓಟದ ಸ್ಪರ್ಧೆ,ಚಕ್ರ ಎಸೆತ,ಕಣ್ಣು ಕಟ್ಟಿ ಡಬ್ಬಿ ಹೊಡೆಯುವ ಆಟ,ಕುರ್ಚಿ

ಆಟ,ಚೀಲದಲ್ಲಿ ಓಟುವ ಆಟ,ನೀರು ತುಂಬುವ ಆಟ,ಕೇರಂ ಮುಂತಾದ ಆಟಗಳನ್ನು ಆಡಿಸಲಾಯಿತು.

ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ಆಟೋಟ ಸ್ಪರ್ಧೆಗೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ನಾಗಪ್ಪ ನರಿ.ಗುರುರಾಜ ಕಟ್ಟಿ,ಶ್ರೀನಿವಾಸರಾವ್, ವಿಜಯಾ,ಅಂಬಕ್ಕ,ಶಂಕ್ರಮ್ಮ, ರತ್ನಾ,ಗೌಸಿಯಾ ಬೇಗಂ,ಗಂಗಮ್ಮ,ರಾಜೇಶ್ವರಿ,ವಿಜಯಲಕ್ಷ್ಮೀ,ಮೋಹಿನ್‌ಪಾಷಾಬಿ,ಭಾರತಿ ಭಾಗವಹಿಸಿದ್ದರು.ಕೊನೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಮಕ್ಕಳು ಬಹುಮಾನ ವಿತರಿಸಿದರು.
Please follow and like us:
error