ಪಿಕೆಜಿಬಿ ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ ಜೂನಿಯರ್ ಎಟಿಎಂ ಕಾರ್ಡ ವಿತರಣೆ

ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ತಮಗೆ ಅವಶ್ಯವಿರುವ ಶೈಕ್ಷಣಿಕ ಅಗತ್ಯ ಪೂರೈಕೆಗಳನ್ನು ಪಡೆದುಕೊಳ್ಳಲು ತಮ್ಮ ಪಾಲಕರು ಖಾತೆಗೆ ಜಮಾ ಮಾಡುವ ಹಣ ಪಡೆದುಕೊಳ್ಳಲು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಜೂನಿಯರ್ ಎಟಿಎಂ ಕಾರ್ಡ ಸಿದ್ದಪಡಿಸಿದ್ದು ಅದರ ವಿತರಣಾಕಾರ್ಯ ಗುರುವಾರ ನಗರದ ಟ್ರಿನಿಟಿ ಪಬ್ಲಿಕ್ ಶಾಲೆಯಲ್ಲಿ ಜರುಗಿತು.

   ವಿದ್ಯಾರ್ಥಿಗಳಿಗೆ ಜೂನಿಯರ್ ಎಟಿಎಂ ಕಾರ್ಡ ವಿತರಣೆಯನ್ನು ಪಿಕೆಜಿಬಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕ ಪ್ರಹ್ಲಾದ್.ಬಿ.ದೇಸಾಯಿರವರು ಎಟಿಎಂ ಕಾರ್ಡ ವಿತರಣೆಮಾಡಿ ಇದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ೧೦ ರಿಂದ ೧೮ ನೇ ವರ್ಷ ವಯಸ್ಸಿನ ಎಲ್ಲಾ ವಿಧ್ಯಾರ್ಥಿಗಳಿಗೆ ಬಳಕೆಗೆ ನೀಡಲಾಗುವುದು ತಮ್ಮ ಖಾತೆಯಲ್ಲಿ ಹಣ ಜಮಾ ಇದ್ದರೆ ಎಟಿಎಂ ಕಾರ್ಡ ಮೂಲಕ ಹಣ ಪಡೆಯಬಹುದು ೧೦ ವರ್ಷಗಳ ವರೆಗೆ ಈ ಜೂನಿಯರ್ ಎಟಿಎಂ ಕಾರ್ಡ ಚಾಲನೆಯಲ್ಲಿರುತ್ತದೆ ಇದರ ಸದ್ಭಳಕೆ ಮಾಡಿಕೊಳ್ಳಿ ಸಿಕ್ರೇಟ್ ನಂಬರ್ ಗೌಪ್ಯವಾಗಿ ಇಟ್ಟುಕೊಳ್ಳಿ ಶಿಕ್ಷಣ ಸಾಲ ಸೌಲಭ್ಯ ಕೂಡಾ ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುವುದು ವಿದ್ಯಾರ್ಥಿಗಳು ಚನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಪ್ರಜೆಗಳಾಗಬೇಕೆಂದು ಪಿಕೆಜಿಬಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕ ಪ್ರಹ್ಲಾದ್ ಬಿ ದೇಸಾಯಿರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
  ಈ ಸಂದರ್ಭದಲ್ಲಿ ಪಿಕೆಜಿಬಿ ಬ್ಯಾಂಕ್ ಕೊಪ್ಪಳ ಶಾಖೆಯ ಹಿರಿಯ ಪ್ರಬಂಧಕ ಕೆ.ವೀರಣ್ಣ, ಪ್ರಾದೇಶಿಕ ಕಚೇರಿಯ ಪ್ರಬಂಧಕ ಚಂದ್ರಶೇಖರಯ್ಯ ಸೊಪ್ಪಿಮಠ,  ಕೊಪ್ಪಳ ಶಾಖೆಯ ಸಹಾಯಕ ಪ್ರಬಂಧಕ ಪ್ರಸನ್ನಕುಮಾರ ವೈದ್ಯ ಮತ್ತು ಟ್ರಿನಿಟಿ ಶಾಲೆಯ ಪ್ರಾಚಾರ್ಯ ಅಮರೇಶ ಮತ್ತು ಸಹ ಶಿಕ್ಷಕ ಸಂಗಮೇಶ ಸೇರಿದಂತೆ ಅನೇಕರು ಪಾಲ್ಗೊಂಡು ಶಾಲೆಯ ವಿದ್ಯಾರ್ಥಿಗಳಿಗೆ ಜೂನಿಯರ್ ಎಟಿಎಂ ಕಾರ್ಡ ವಿತರಣೆ ಮಾಡಿದರು.
Please follow and like us:

Related posts

Leave a Comment