ಕಾಂಗ್ರೆಸ್‌ನಿಂದ ಬಿರುಸಿನ ಪ್ರಚಾರ

ಕೊಪ್ಪಳ. ಫೆ. ೨೩: ಇರಕಲ್‌ಗಡಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ನಿಂಗಪ್ಪ ಗುಮಗೇರಿ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ಇರಕಲ್‌ಗಡಾ ಜಿ.ಪಂ.ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಪಕ್ಷದ ಅಭ್ಯರ್ಥಿ ರೇಣುಕಾ ನಿಂಗಪ್ಪ ಗುಮಗೇರಿ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇರಕಲ್‌ಗಡಾ ಜಿ.ಪಂ.ಕ್ಷೇತ್ರದ ಹಿಂದಿನ ಸದಸ್ಯರೂ ಕಾಂಗ್ರೆಸ್‌ನವರೇ ಆಗಿದ್ದರು. ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮರು ಚುನಾವಣೆ ನಡೆಯುತ್ತಿದೆ. 
ಈ ಭಾರಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ. ಇಲ್ಲಿ ಅನುಕಂಪದ ಅಲೆ ಇದೆ ಎಂದ ಅವರು, ರಾಜ್ಯ ಸರಕಾರದ ವೈಫಲ್ಯ ನಮ್ಮ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದರು.
ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ನಗರಸಭೆ ಸದಸ್ಯರಾದ ಜಾಕೀರ ಹುಸೇನ್ ಕಿಲ್ಲೇದಾರ, ಟಿ.ಜನಾರ್ಧನ, ವಿಜಯಲಕ್ಷ್ಮೀ ರಾಮಕೃಷ್ಣ, ಮುಖಂಡರಾದ ಮಲ್ಲೇಶಪ್ಪ, ಮನೋಹರ ಸ್ವಾಮಿ, ಅಶೋಕ ತೋಟದ, ಯಮನೂರಪ್ಪ ನಡುಲಮನಿ, ಜೋಗದ ಹನುಮಂತಪ್ಪ ಮತ್ತಿತರರು ಪಾಲ್ಗೊಂಡಿದ್ದರು. ರಾಮಣ್ಣ ಸಾಲಮನಿ, ಮುನೀರ್ ಸಿದ್ದಕಿ ಹಾಗೂ ರಮೇಶ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

Please follow and like us:
error