ಕ್ರಾಂತಿಯನ್ನು ಕಳೆದುಕೊಂಡ ಕೊಪ್ಪಳ

ಕೊಪ್ಪಳ : ಬಡವರ, ತುಳಿತಕ್ಕೊಳಗಾದವರ ಪರವಾಗಿ ಹೋರಾಟ ಮಾಡುತ್ತಿದ್ದ ರಾಜು ಬಾಗಲಿ ಸಾವಿನಿಂದ ಕೊಪ್ಪಳ ಕ್ರಾಂತಿಯನ್ನೇ ಕಳೆದುಕೊಂಡಿದೆ ಎಂದು ಸಾಹಿತಿ ಮಹಾಂತೇಶ್ ಮಲ್ಲನಗೌಡರ್ ಹೇಳಿದರು. ಅವರು ಗಾಂಧಿನಗರದ ಗೊಂದಳಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜು ಬಾಗಲಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರಾಜು ಬಾಗಲಿ ಡಿವೈ ಎಫ್ ಐ ತಾಲೂಕ ಅಧ್ಯಕ್ಷರಾಗಿ ಕೊಳಚೆ ಪ್ರದೇಶದವರ ಹಕ್ಕುಗಳಿಗಾಗಿ ನಡೆಸುತ್ತಿದ್ದ ಹೋರಾಟ ಎಂದಿಗೂ ಮರೆಯಲಾಗದು ಎಂದು ಹೇಳಿದರು. ಸಂಘಟನೆಯ ಮುಖ್ಯಸ್ಥರಾದ ಕಾಸಿಂಸಾಬ,ವಾಸುದೇವ ಮತ್ತಿತರರು ಮಾತನಾಡಿದರು. ಹುಲಗಪ್ಪ ಗೋಕಾವಿ ಅಧ್ಯಕ್ಷತೆ ವಹಿಸಿದ್ದರು. ಸುಂಕಪ್ಪ ಕಾರ್ಯಕ್ರಮ ನಿರೂಪಸಿದರು.ಡಿವಾಯ್ ಎಫ್ಐನ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Leave a Reply