ಕನಕಗಿರಿ ಉತ್ಸವ : ವಿಶೇಷ ಬಸ್ ವ್ಯವಸ್ಥೆ

  ಇದೇ ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಅದ್ಧೂರಿ ಕನಕಗಿರಿ ಉತ್ಸವ ಗಂಗಾವತಿ ತಾಲೂಕು ಕನಕಗಿರಿಯಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು, ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲು ಅನುಕೂಲವಾಗುವಂತೆ ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗದಿಂದ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ.
     ಕನಕಗಿರಿ ಉತ್ಸವಕ್ಕೆ ಜಿಲ್ಲೆಯ ಗಂಗಾವತಿ, ಕುಷ್ಟಗಿ, ಕನಕಗಿರಿ, ತಾವರಗೇರಾ, ಕಾರಟಗಿ ಮತ್ತು ಕೊಪ್ಪಳದಿಂದ ಕನಕಗಿರಿಗೆ  ಪ್ರಯಾಣಿಸಲು ಅನುಕೂಲವಾಗುವಂತೆ ಜನದಟ್ಟಣೆಗೆ ಅನುಸಾರವಾಗಿ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು.  ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ.ಕ.ರ.ಸಾ.ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.
Please follow and like us:
error