ಮಹಿಳಾ ಸಹಾಯವಾಣಿ ಹಾಗೂ ದತ್ತು ಸ್ವೀಕಾರ ಕೇಂದ್ರ ಆರಂಭಿಸಲು ಪ್ರಸ್ತಾವನೆಗಳಿಗೆ ಆಹ್ವಾನ

 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಹಿಳಾ ಸಹಾಯವಾಣಿ ಹಾಗೂ ದತ್ತು ಸ್ವೀಕಾರ ಕೇಂದ್ರ ಆರಂಭಿಸಲು ವಿವಿಧ ನಿಬಂಧನೆಗಳಿಗೆ ಒಳಗೊಂಡು ಆಸಕ್ತ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಮುಚ್ಚಿದ ಲಕೋಟೆಯಲ್ಲಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. 
          ಮಹಿಳಾ ಸಹಾಯವಾಣಿ : ಸಂಸ್ಥೆಯು ನೋಂದಣಿಯಾಗಿ ಕನಿಷ್ಟ ೩ ವರ್ಷ ಆಗಿರಬೇಕು, ಮಹಿಳಾ/ಮಕ್ಕಳ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರಬೇಕು ಹಾಗೂ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವಲ್ಲಿ ಅನುಭವ ಹೊಂದಿರಬೇಕು, ಪ್ರತಿ ವರ್ಷ ಸಂಸ್ಥೆಯು ನವೀಕರಣಗೊಂಡಿರಬೇಕು, ಸಂಸ್ಥೆಯು ಲೆಕ್ಕಪತ್ರ, ದಾಖಲೆಗಳು ಹಾಗೂ ವಾರ್ಷಿಕ ಪ್ರಗತಿ ವರದಿಗಳನ್ನು ಕ್ರಮಬದ್ಧವಾಗಿ ಇಟ್ಟಿರಬೇಕು, ಆರ್ಥಿಕವಾಗಿ ಸದೃಢವಾಗಿರುವ ಬಗ್ಗೆ ಬ್ಯಾಲೆನ್ಸ ಶೀಟ್ ಮತ್ತು ಅಡಿಟ್ ವರದಿಗಳನ್ನು ಕಳೆದ ಮೂರು ವರ್ಷಗಳ ಮಾಹಿತಿ ನೀಡುವುದು, ಈಗಾಗಲೇ ಮಹಿಳಾ ಮತ್ತು ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದ್ದಲ್ಲಿ ದಾಖಲೆಗಳನ್ನು ಸಲ್ಲಿಸುವುದು, ಸಂಸ್ಥೆಯು ಸುಸರ್ಜಿತ ಮೂಲ ಸೌಲಭ್ಯಗಳನೊಳಗೊಂಡ ಕಟ್ಟಡವನ್ನು ಹಾಗೂ ಸಿಬ್ಬಂದಿ ಹೊಂದಿರಬೇಕು ಅಥವಾ ಸ್ವಂತ ಕಟ್ಟಡ ಇಲ್ಲದಿದ್ದಲ್ಲಿ ಬಾಡಿಗೆ ಕಟ್ಟಡ ವ್ಯವಸ್ಥೆ ಮಾಡುವಂತಿರಬೇಕು.
         ದಸ್ತು ಸ್ವೀಕಾರ ಕೇಂದ್ರ : ಮೇಲ್ಕಂಡ ೭ ನಿಬಂಧನೆಗಳ ಜೊತೆಗೆ ದತ್ತು ಸ್ವೀಕಾರ ಕೇಂದ್ರ ಆರಂಭಿಸಲು ಇಚ್ಚಿಸುವ ಸಂಸ್ಥೆಗಳು ಈ ಕೆಳಕಂಡ ಅಂಶಗಳನ್ನು ಸಹ ಒಳಗೊಂಡಿರುತ್ತದೆ, ಬಾಲ ನ್ಯಾಯ ಕಾಯ್ದೆ ೨೦೦೦ ನಿಯಮಗಳ ಅಡಿಯಲ್ಲಿ ನಿರ್ವಹಿಸತಕ್ಕದ್ದು, ಮೂರು ವರ್ಷಗಳವರೆಗೆ ಅನುದಾನ ನೀಡುವುದಿಲ್ಲ, ಸಂಸ್ಥೆಯ ಸ್ವದೇಶಿ ದತ್ತು ಕಾರ್ಯಕ್ರಮವನ್ನು ಕಡ್ಡಾಯವಾಗಿ ನಿರ್ವಹಿಸತಕ್ಕದ್ದು. 
         ಪ್ರಸ್ತಾವನೆ ಸಲ್ಲಿಸಲು ಮೇ.೨೮ ಕೊನೆಯ ದಿನವಾಗಿದ್ದು, ಪ್ರಸ್ತಾವನೆ ಪರಿಶೀಲನೆ ಹಾಗೂ ನೇರ ಸಂದರ್ಶನವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಸಮಿತಿಯ ಸಭೆಗೆ ಖುದ್ದಾಗಿ ನೇರ ಸಂದರ್ಶನಕ್ಕೆ ಮೇ.೩೦ ರಂದು ಮಧ್ಯಾಹ್ನ ೧೨.೦೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ ಇವರ ದೂರವಾಣಿ ಸಂಖ್ಯೆ:೦೮೫೩೯-೨೨೨೭೦೩ ಇವರನ್ನು ಸಂಪರ್ಕಿಸಬಹುದಾಗಿದೆ.
Please follow and like us:
error