ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಉದ್ಘಾಟನೆ

ಕೊಪ್ಪಳ: .ನಗರದಲ್ಲಿ ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಉದ್ಘಾಟನಾ ಸಮಾರಂಭವು ದಿನಾಂಕ ೮/೪//೨೦೧೧ ರಂದು ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಸಂಜೆ ೪:೦೦ ಕ್ಕೆ ಜರಗಿತು. ಪರಿಷತ್ ನ ಉದ್ಘಾಟನೆಯನ್ನ ಹಿರಿಯ ನ್ಯಾಯವಾದಿ ಶ್ರೀ ಆರ್. ಎಚ್. ಹುಲಗಿಯವರು ನೆರವೆರಿಸಿ ಮಾತನಾಡುತ್ತಾ ರಾಜ್ಯ ವಕೀಲರ ಸಾಹಿತ್ಯ ಪರಿಷತನ ಅವಶ್ಯಕತೆ ಇತ್ತು ಅದನ್ನು ಸಾದ್ಯವಾದದ್ದು ಹಾಗು ನನ್ನ ಸದಸ್ಯತ್ವ ಪಡೆಯುವುದರ ಮೂಲಕ ಉದ್ಘಾಟನೆಯನ್ನ ಮಾಡಿದ್ದು ಅತಿವ ಸಂತೋಷವೆನಿಸುತ್ತದೆ ಎಂದರು, ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಅಲ್ಬಣ್ಣ ಕಣವಿ ಮಾತಾಡುತ್ತ ವಕೀಲರ ಘನತೆ ಕುರಿತು ಮಾತನಾಡಿದರು, ಮುಖ್ಯಅಥಿತಿಗಳಾಗಿ ವಿಶ್ರಾಂತ ಪ್ರಾಚಾಯ೯ ಶ್ರೀ ಸಿ.ವಿ. ಕಲ್ಮಠ ಆಗಮಿಸಿ ಅವರು ಕಾನೂನು ಸೇವಾಕತ೯ರ ಮಸೂದೆ-೨೦೧೦ ಯನ್ನು ಎಳೆಏಳೆಯಾಗಿ ಬಿಡಿಸಿಟ್ಟರು ಮಸುದೆಯ ಸಾದಕ ಬಾದಕ ಕುರುತು ಒಬ್ಬ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಹಾಗು ಕಕ್ಷಿದಾರರಾಗಿ ತಮಗಿರುವ ಅನುಭವದ ಮಾತುಗಳನ್ನು ಮನಮುಟ್ಟುವಂತೆ ಮಾತನಾಡಿದರು, ಕಾಯ೯ಕ್ರಮದಲ್ಲಿ ಶ್ರೀ ಯು.ಎಸ್. ಸೊಪ್ಪಿಮಠ ವಕೀಲರು ಮತ್ತು ಶ್ರೀ ಎಮ್,ಪಿ.ರೇವಡಿ ವಕೀಲರು “ಕಾನೂನು ಸೇವಾಕತ೯ರ ಮಸೂದೆ-೨೦೧೦ ( ವೃತ್ತಿ ಘನತೆ ನಿಯಂತ್ರಣ, ಕಕ್ಷಿದಾರರ ಹಿತರಕ್ಷಣೆ ಮತ್ತು ಕಾನೂನು ಆಳ್ವಿಕೆಯ ಬಡ್ತಿ) ಈ ವಿಷಯ ಕುರಿತು ಉಪನ್ಯಾಸನೀಡಿದರು. ನಂತರ ನೇಡೆಯುವ ” ಕಟೆಕಟೆಯಲ್ಲಿ ” ವಿನೂತನ ಕಾಯ೯ಕ್ರಮದ ಪ್ರಾರಂಭದ ಕಟೆಕಟೆಯಲ್ಲಿ ಹಾಜರಾದ ಹಿರಿಯ ಸಾಹಿತಿ ಪ್ರೋ!! ಅಲ್ಲಮಪ್ರಭು ಬೆಟ್ಟದೂರು ರವರು ಹನುಮಂತರಾವ್ ವಕೀಲರು ಅಲ್ಲಮಪ್ರಭು ಬೆಟ್ಟದೂರು ರವರ ಬದುಕು ಬರಹ ಕುರಿತು ಪ್ರಶ್ನೆ ಕೇಳಿದರು, ಕೇಳಿದಂತಹ ಪ್ರಶ್ನೆಗಳಿಗೆ ಸ್ವಾರಸ್ಯಕರ ಉತ್ತರವನ್ನು ನೀಡಿ ತಮ್ಮ ಕಳೆದ ದಿನಗಳನ್ನು ಅನಾವರಣಗೋಳಿಸಿದರು ,” ಕಟೆಕಟೆಯಲ್ಲಿ ” ಕಾಯ೯ಕ್ರಮದ ನ್ಯಾಯ ಸ್ಥಾನದಲ್ಲಿದ್ದ ಶ್ರೀಮತಿ ಕಾಳಮ್ಮ ಪತ್ತಾರ ಅಲ್ಲಮಪ್ರಭು ಬೆಟ್ಟದೂರು ಮತ್ತು ಹನುಮಂತರಾವ್ ವಕೀಲರ ಸಡುವಿನ ಸಂವಾದವನ್ನು ಮೆಚ್ಚಿದರು ಮತ್ತು ಅವರಿಂದ ಕವನವನ್ನು ಓದಲು ವಿಂತಿಸಿದರು. ಸದರಿ ಸಮಾರಂಭದಲ್ಲಿ ರಾಜ್ಯ ವಕೀಲರ ಸಂಘದ ರಾಜ್ಯಾಧ್ಯಕ್ಷ ವಿಜಯ ಅಮೃತರಾಜ್ ಹಾಗು ಪದಾಧಿಕಾರಿಗಳು ನಗರದ ಹಿರಿಯ ಸಾಹಿತಿಗಳಾದ ಹೆಚ್.ಎಸ್.ಪಾಟೀಲರು, ಹಿರಿಯ ಹಾಗೂ ಕಿರಿಯ ವಕೀಲರು ಭಾಗಚಹಿಸಿದ್ದರು, ಮಹೇಶ್ವರಯ್ಯ ವಕೀಲರ ಶಾರದಾ ಸ್ತುತಿಯೊಂದಿಗೆ ಸಮಾರಂಭ ಪ್ರಾರಂಭವಾಯಿತು , ಆಕಾಸವಾಣಿಯ ಭೀಮಸೇನ ಇಂದ್ರಗಿ ನಿರೂಪಿಸಿದರು.
Please follow and like us:
error