ತುಂಗಭದ್ರೆ ನೀರು ಕಲುಷ ಕಂಡೂ ಕಣ್ಮುಚ್ಚಿದ ಸರ್ಕಾರ

ಕೊಪ್ಪಳ :- ತುಂಗಭದ್ರೆಯ ಜಲಾಶಯದ ಹಿನ್ನೀರು ಮತ್ತೆ ಪಾಚಿಗಟ್ಟಿದುರ್ವಾಸನೆ ಬೀರುತ್ತಿದೆ. ಇದನ್ನು ನಮ್ಮ ತುಂಗಾಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಪ್ರತೀ ವರ್ಷವೂ ಹೋರಾಟ ಮಾಡಿ ಸಚಿವರು ಅಧಿಕರಿಗಳು ಮತ್ತು ಕಾಡಾ ಇಲಾಖೆ ಸರ್ಕಾರ ಸರ್ಕಾರ ಮುಂತಾದ ಸಂಬಂಧಿಸಿದವರೆಲ್ಲರ ಗಮನಕ್ಕೆ ತಂದು ಶುದ್ಧಿಕರಣದ ಸಂಬಂಧಿದವರೆಲ್ಲರ ಗಮನಕ್ಕೆ ತಂದು ಶುದ್ಧಿಕರಣಕ್ಕಾಗಿ ಆಗ್ರಹಿಸಿದರೂ ಕಣ್ಮೂಚಿ ಕುಳಿತರುವುದು ಖಂಡನೀಯ 
ಈಗಾಗಲೇ  ಎರಡು ವರ್ಷಗಳ ಹಿಂದೆ ನಮ್ಮ ಸಮಿತಿಯಿಂದ ಕಲುಷಕ್ಕೆ  ಕಾರಣ ಕಂಡು ಹಿಡಿಯಲು ಒಂದು ತಂಡ ರಚಿಸಿಕೊಂಡು ತುಂಗಾ-ಭದ್ರಾ ಎರಡು ನದಿಗಳ ಪಾತ್ರಹಿಡಿದು ಸಂಚರಿಸಿದಾಗ ಹರಿಹರದ ಪಾಲಿ ಪೈಬರ್ ಖಾರ್ಖನೆಯಿಂದ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಯುಕ್ತ ಅತ್ಯಂತ ಅಪಾಯಕಾರಿ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ವಿಡಿಯೋ ಹಾಗೂ ಪೋಟೋ ತೆಗೆದುಕೊಂಡು ಬಂದಿದ್ದೇವೆ. ಅದೇ ರೀತಿ ಭದ್ರಾ ನದಿಯದಂಡೆಗಿರುವ ಭದ್ರಾವತಿಯ ಕಾಗದ ಕಾರ್ಖಾನೆ ಹಾಗೂ ಕಬ್ಬಣಿದ ಖಾರ್ಖಾನೆಯ ತ್ಯಾಜ್ಯವನ್ನು ನೇರ ನದಿಗೆ ಬಿಡಲಾಗುತ್ತಿದೆ. ಈ ತ್ಯಾಜ್ಯವನ್ನು ನೇರ ನದಿಗೆ ಬಿಡಲಾಗುತ್ತಿದೆ. 
ಈ ಕಾರಣದಿಂದ  ನೀರು ಕಲುಷಗೊಂಡು ನೇರವಾಗಿ ಶುದ್ಧಿಕರಿಸಿದೆ ಕುಡಿಯಲಿಕ್ಕೆ ಬಾರದೆಂದು ಪರಿಸರ ಇಲಾಖೆ ವರದಿ ನೀಡಿದ್ದರು ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಈ ನೀರನ್ನು ನೇರವಾಗಿ ಕೊಪ್ಪಳ ರಾಯಚೂರು ಬಳ್ಳಾರಿ ಜಿಲ್ಲೆಗಳ ಜನ ಕುಡಿಯುತ್ತಿರುವುದರಿಂದ ಇದರಿಂದಾಗುವ ಅಪಾಯಕ್ಕೆ ಯಾರು ಹೊಣೆ? ಸಚಿವ ಆನಂದಸಿಂಗ ಹೊಸಪೇಟೆಯವರಾಗಿದ್ದು ಅವರಿಗೂ ಈಗಾಗಲೇ ಎರಡು ಬಾರೆ ನಮ್ಮ ಸಮಿತಿ ಗಮನಕ್ಕೆ ತಂದಿದೆ ಆದರೆ ಆ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ತೋರುತ್ತಿಲ್ಲ. ಯಾರಾದರೂ ಸತ್ತಾಗಲೋ ಸರ್ಕಾರ ಕಣ್ಣುತೆರೆದರೆ ಪ್ರಯೋಜನವೇನು? 
ಮಳೆಗಾಲದಲ್ಲಿಯೆ ಈ ರೀತಿ ಇರುವ ನೀರು ಇನ್ನು ಬೇಸಿಗೆಯಲ್ಲಿ ಕಡಿಮೆ ಪ್ರಮಾಣದ ನೀರಿದ್ದಾಗ ಅದು ಮತ್ತಷ್ಟು ಕಲುಷಗೊಳ್ಳುತ್ತದೆ. ಅಲ್ಲಿಯ ನೀರು ಮತ್ತು ಮರಳು ಬಚ್ಚಲಿನವಾಸನೆಯಾಗಿ ಮೂಸಿ ನೋಡಿದರೆ ವಾಂತಿ ಬರುವಂತಿದೆ ಅಂಥ ನೀರನ್ನು ಕುಡಿದವರ ಗತಿಯೇನು? ಈ ಭಾಗದ ಜನರೂ ಎಚ್ಚತ್ತುಕೊಳ್ಳಬೇಕಿದೆ. 
ಇನ್ನಾದರೂ ಈ ಬಗ್ಗೆ ಯೋಗ್ಯಕ್ರಮ ತೆಗೆದುಕೊಂಡು ಕಲುಷಕ್ಕೆ ಕಾರಣವಾದ ಕಾರ್ಖಾನೆಗಳನ್ನು ತಡೆಗಟ್ಟಿ ನೀರಿ ಶುದ್ಧಿಕರಣಕ್ಕೆ ಪ್ರಯತ್ನಿಸದಿದ್ದರೆ. ತುಂಗ ಭದ್ರಾ ಮತ್ತು ಜಿಲ್ಲಾ ಹೋರಾಟ ಸಮಿತಿಯಿಂದ ಉಗ್ರ ಹೋರಾಟ ಆರಂಭಿಸಲಾಗುವುದೆಂದು ಅಧ್ಯಕ್ಷ ವಿಠಪ್ಪ ಗೋರಂಟ್ಲಿ ಮತ್ತು ಪದಾಧಿಕಾರಿಗಳಾದ ಜೆ.ಭಾರದ್ವಾಜ, ಡಿ.ಎಚ್.ಪೂಜಾರ, ಎಚ್.ರಘು, ಎಂ.ಆರ್.ವೆಂಕಟೇಶ, ಪಂಪಾಪತಿ ರಾಟಿ, ಮುಂತಾದವರು ಎಚ್ಚರಿಸಿದ್ದಾರೆ. 
    
Please follow and like us:
error