You are here
Home > Koppal News > ಲೋಹ ಸಂಗ್ರಹ ಅಭಿಯಾನ-ಚಾಲನೆ

ಲೋಹ ಸಂಗ್ರಹ ಅಭಿಯಾನ-ಚಾಲನೆ

 ಭಾಗ್ಯನಗರ  ಗ್ರಾಮದಲ್ಲಿ ಶ್ರೀಗ್ರಾಮದೇವತೆಯ ಪ್ರಾಂಗಣದಲ್ಲಿ ಲೋಹಸಂಗ್ರಹ ಅಭಿಯನವನ್ನು ಹೋನ್ನುರ್ ಸಭ್ ಭೈರಪುರ್ ಗ್ರಾಮ ಪಂಚಯತ್ ಅಧ್ಯಕ್ಷರು ಇವರು ಚಾಲನೆ ನೀಡಿದರು. ಮತ್ತು ಬಿ.ಜೆ.ಪಿ ಯ ಹಿರಿಯ ಮುಖಂಡರಾದ  ರಾಘವೆಂದ್ರ ಪಾನಘಂಟಿ ವಕೀಲರು ಉಪಸ್ತಿತಿಯಲ್ಲಿ ಮಾತನಾಡುತ್ತ ಸರ್ಧಾರ್ ವಲ್ಲಭಬಾಯಿ ಪಟೇಲರ ಎಕತಾ ಪ್ರತಿಮೆ ಯನ್ನು ಗುಜರಾತಿನ ನರ್ಮಧ ಜಿಲ್ಲೆಯ ಕೇವಾಡಿಯಾದಲ್ಲಿರುವ ಸರ್ಧಾರ್ ಸರೋವರ ಆಣೆಕಟ್ಟಿನ ದಕ್ಷಿಣಕ್ಕೆ ಸುಮಾರು ೩.೫ ಕಿ.ಮಿ ದೂರದ ಸಾಧುಬೀಟ್ ದ್ವೀಪದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ೧೮೨ಮೀ ಎತ್ತಿರದ ಪ್ರತಿಮೆ ಇದಾಗಲಿದ್ದು ಇದು  ವಿಶ್ವದಲ್ಲಿಯೆ ಅತೀ ಎತ್ತಿರದ ಪ್ರತಿಮೆ ಆಗಲಿದೆ. ಈ ಪ್ರತಿಮೆಗೆ ಭಾರತ ದೇಶದಲ್ಲಿ ಇರುವಂತಹ ಎಲ್ಲ ಗ್ರಾಮಪಂಚಾಯಿತಿ ಒಳಗೊಂಡು ಅಲ್ಲಿನ ರೈತರ ಜೀವನಾಡಿ ಆಗಿರುವಂತಹ ಒಪಯೋಗಿಸಿದಂತಹ ಲೋಹಗಳನ್ನು ಅಂದರೆ ಪಿಕಾಸಿ,ಕುರ್ಚಿಗಿ,ಗುದ್ದಲಿ ಇನ್ನು ಅನೇಕ ವಸ್ತುಗಳನ್ನು ಒಪಯೋಗಕ್ಕೆ ಬಾರದ್ದನ್ನು ಸಂಗ್ರಹಿಸಿ ಕರಗಿಸಿ ಎಕತಾ ಪ್ರತಿಮೆಯನ್ನು ತಯಾರಿಸಲಿಕ್ಕೆ ಈ ಅಭಿಯಾನ ಆಗಿರುತ್ತದೆ ಎಂದು ತಿಳಿಸಿದರು.
ಗ್ರಾಂಪಂ  ಅಧ್ಯಕ್ಷರಾದ  ಹೋನ್ನುರ್ ಸಾಭ್ ಮಾತನಾಡುತ್ತ ಈ ದೇಶದ ಉಕ್ಕಿನ ಮನುಷ್ಯ ವಲ್ಲಭಬಾಯಿ ಪಟೇಲರ ಪ್ರತಿಮೆಯು ಇಸ್ಟೊಂದು ದೊಡ್ಡ ಪ್ರಮಾಣದ ಪ್ರತಿಷ್ಟಪನೆ ಮಾಡುವ ಗುರಿಯನ್ನು ಇಟ್ಟುಕೊಂಡಂತಹದನ್ನು ಶ್ಲಾಗನೀಯ ಪಟೇಲರು ತಮ್ಮ ವಿಧ್ಯಾಭ್ಯಾಸಕ್ಕಾಗಿ ಕಸ್ಟಪಟ್ಟು ಈಜಿ ಕೊಂಡು ಹೋಗುತಿದ್ದರು. ಅಂತಹ ಮಹಾ ವ್ಯಕ್ತಿಯ ಪ್ರತಿಮೆಗೆ ನಮ್ಮ ಊರಿನಿಂದ ರೈತರ ಕೊಡುಗೆ ಯಾದ ಲೋಹವನ್ನು ಅರ್ಪಿಸಿದ್ದು ಇದೊಂದು ಅರ್ಥಪೊರ್ಣವಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸ್ವಾಗತ ಮತ್ತು ಪರಿಚಯವನ್ನು ತಾಲೂಕ ಬಿ.ಜೆ.ಪಿ ಅಧ್ಯಕ್ಷರಾದ ಡಾ.ಕೋಟ್ರೇಶ್ ಶೇಡ್ಮಿ ನೆರೆವೇರಿಸದರು. ಈ ಕಾರ್ಯಕ್ರಮದಲ್ಲಿ ತಾಲೂಕ ಪಂಚಯತಿ ಸದಸ್ಯರಾದ ಶ್ರೀನಿವಾಸ್ ಹ್ಯಾಟಿ,ಪೆದ್ದ ಸುಬ್ಬಯ, ಡ.ಶ್ರೀನಿವಾಸ ಹನ್ಸಿ,ಸೂರೇಶ್ ಪೆದ್ದಿ,ಏಕಪ್ಪ ದೇವದುರ್ಗ,ಕೋಟ್ರೇಶ್ ಕವಲುರ್,ರುಕ್ಮನ್ನ ಶಾವಿ,ಯಮನಪ್ಪ ನರಗುಂದ್,ರಾಘವೆಂದ್ರ ಪಾಸ್ತೆ,ದೇವೇಂದ್ರ್ ಸಾ,ಕುಬೇರ,ಮಹೆಶ್,ಬಸುವರಾಜ್ ಗೋಟುರ್,ಪರಶುರಾಮ್ ನಾಯಕ್,ಶಂಕರ್ ನಿಂಗಲ್‌ಬಂಡಿ ಗ್ರಾಂಪಂ ಸದಸ್ಯರಾದ ಮಲ್ಲೇಶ್ ಬುಲ್ಟಿ,ಶಿವರಾಮ ಮೇಗಳಮನಿ,ಚಂದ್ರು ಉಂಕಿ,ಯಮನಪ್ಪ ತಂಬ್ರಳ್ಳಿ,ಶ್ರೀಮತಿ ಗಂಗಮ್ಮ ಪಟ್ಟನಶೆಟ್ರ್,ಸರೋಜ ಬಾಕಳೆ ರೈತರಾದ ವೆಂಕಪ್ಪ,ಸಿದ್ದಪ್ಪ ಬುಡ್ಡಿ,ಮಲ್ಲಪ್ಪ,ಮಂಜು ಈ ಪ್ರಕಟನೆಯನ್ನು ರಾಕೇಶ ಪಾನಘಂಟಿ ಅವರು ತಿಳಿಸಿದ್ದಾರೆ.

Leave a Reply

Top