ಬೇಳೂರು ಗ್ರಾಮದಲ್ಲಿ ಸಸಿ ನೆಡುವ ಕಾರ್ಯಕ್ರಮ.

 ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದಲ್ಲಿ ಗ್ರಾ.ಪಂ. ಕಾತರಕಿ ಗುಡ್ಲಾನೂರ ಇವರು ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ, ಜಿಲ್ಲಾ ಪಂಚಾಯತ ಸದಸ್ಯೆ ಭಾಗಿರಥಿ ಶಂಕರಗೌಡ ಪಾಟೀಲ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದುಪುಡಿ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ ಮಹಾಂತಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಅಧಿಕಾರಿ ಬಾಬುಶೆಟ್ಟರ್ ಗ್ರಾ.ಪಂ. ಉಪಾಧ್ಯಕ್ಷ ಬಸವರಾಜ ಅಂಗಡಿ, ಗ್ರಾ.ಪಂ. ಸದಸ್ಯರಾದ ಡಾ|| ಮಲ್ಲಿಕಾರ್ಜುನ ವೈಧ್ಯ, ರೇಖಾ ರಾಮಪ್ಪ ಗುಡ್ಲಾನೂರ, ಸಿದ್ದಪ್ಪ ಹರಿಜನ, ಶಿವಪ್ಪ ಉಳ್ಳಾಗಡ್ಡಿ, ನಾಗರಾಜ ಹುರಕಡ್ಲಿ, ಗ್ರಾಮದ ಹಿರಿಯರಾದ ಕೋಟನಗೌಡ ಪಾಟೀಲ್ ರಾಮಣ್ಣ ಚೆಲ್ಲಾ, ನಿಜಾಂ ಸಾಬ ಮುದಗಲ್, ರಾಮಪ್ಪ ಗುಡ್ಲಾನೂರ ಇತರರು ವೇದಿಕೆ ಮೇಲೆ ಇದ್ದರು. ಪ್ರತಿಯೊಂದು ಮನೆಗೆ ಒಂದು ಶೌಚಾಲಯ ಮತ್ತು ಒಂದು ಗಿಡ ನೆಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದರು.

Leave a Reply