ಹೆಚ್.ಎನ್.ಗಿರೀಶ್‌ಗೆ ಏಕಲವ್ಯ ಪ್ರಶಸ್ತಿ:ಹರ್ಷ,ಅಭಿನಂದನೆ

ಕೊಪ್ಪಳ: ಪ್ಯಾರಾ ಒಲಂಪಿಕ್ಸನಲ್ಲಿ ಪದಕ ವಿಜೇತರಾದ ಹೊಸನಗರದ ಗಿರೀಶ್‌ರವರಿಗೆ ರಾಜ್ಯ ಸರ್ಕಾರವು ನೀಡುವ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದೆ.
ಈ ವಿಚಾರದ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿರವರು,ಹೆಚ್.ಎನ್.ಗಿರೀಶ್‌ರವರಿಗೆ ಕೇಂದ್ರ ಸರ್ಕಾರ ನೀಡುವ ಖೇಲ್‌ರತ್ನ ಪ್ರಶಸ್ತಿಯ ಆಯ್ಕೆಯಲ್ಲಿ ಪ್ರಾರಂಭದಲ್ಲಿ ಪರಿಗಣಿಸಿ ಕೊನೆಯ ಹಂತದಲ್ಲಿ ಕೈಬಿಡಲಾಗಿತ್ತು.ಸಂಘವು ಕೈಬಿಟ್ಟಿರುದರ ಕುರಿತು ಖಂಡಿಸಲಾಗಿತು.
ಆದರೆ ರಾಜ್ಯ ಸರ್ಕಾರವು ಅಂಗವಿಕಲ ಕ್ರೀಡಾಪಟುವಾದ ಹೆಚ್.ಎನ್.ಗಿರೀಶ್‌ರವರನ್ನು ಪರಿಗಣಿಸಿ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡುತಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು ಹರ್ಷ ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಉಪಾಧ್ಯಕ್ಷರಾದ ಹೆಚ್.ಆರ್.ಹಂಜಕ್ಕಿ,ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೊಳರಡ್ಡಿ, ಪ್ರಧಾನ ಕಾರ್ಯದರ್ಶಿ ನಾಗಪ್ಪ ಕಾತರಕಿ,ಸಂಘಟನಾ ಕಾರ್ಯದರ್ಶಿ ಟಿ.ಗೋವಿಂದಪ್ಪ,ಸಹಕಾರ್ಯದರ್ಶಿ ಶಂಕ್ರಮ್ಮ ಬಂಗಾರಶೆಟ್ಟರ್ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. 

Leave a Reply