ಚೆನ್ನೈ ದುರಂತಕ್ಕೆ ಬಹದ್ದೂರಬಂಡಿ ಗ್ರಾಮದ ವಿವಿಧ ಸಂಘ-ಸಂಸ್ಥೆಗಳಿಂದ ೧೨,೫೦೦ ಪರಿಹಾರ ನಿಧಿ ಸಂಗ್ರಹ.

ಕೊಪ್ಪಳ,ಡಿ.೧೪ ಕಳೆದೊಂದು ವಾರದಿಂದ ಹವಮಾನ ವೈಪರಿಥ್ಯದಿಂದ ಜಾಲಾವೃತ್ತಗೊಂಡಿರುವ ಚೆನ್ನೈ ದುರಂತಕ್ಕೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಸಂತ್ರಸ್ಥರಿಗೆ ಸಹಾಯಸ್ತ ನೀಡಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಗಲಿರುಳು ಶ್ರಮಿಸುತ್ತಿದ್ದು ಅಲ್ಲದೇ ಬಾಲಿವುಡ್, ಟಾಲಿವುಡ್ ನಟರು, ಹೆಸರಾಂತ ಕಲಾವಿದರು ಸಾಕಷ್ಟು ಸಂಘ-ಸಂಸ್ಥೆಗಳು ಶ್ರಮಿಸುತ್ತಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಹಜ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಿರುವಾಗಲೇ ಮತ್ತೇ ಹವಮಾನ ಇಲಾಖೆ ಮುನ್ಸೂಚನೆ ನೀಡುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಭಾರಿ ಭೀತಿ ಮೂಡಿಸಿದೆ. ಅದೇ ರೀತಿ ದುರಂತಕ್ಕೆ ಸ್ಪಂಧಿಸಿ ತಾಲೂಕಿನ ಬಹದ್ಧೂರಬಂಡಿ ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಸಹಯೋಗದಲ್ಲಿ ಕೊಪ್ಪಳ ಹಾಗೂ ಬಹದ್ದೂರಬಂಡಿ ಗ್ರಾಮಗಳಲ್ಲಿ ನಿಧಿ ಸಂಗ್ರಹಿಸಿ ಒಟ್ಟು ೧೨,೫೦೦ಗಳನ್ನು ಚೆನ್ನೈನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಲ್ಲಿನ ಎಸ್‌ಬಿಎಚ್ ಬ್ಯಾಂಕ್ ಡಿ.ಡಿ. ತೆಗೆಸಿ ಕಳಿಸಿಕೊಡಲಾಗಿದೆ ಎಂದು ಟಿಪ್ಪು ಸುಲ್ತಾನ ವೆಲ್‌ಪೇರ್ ಟ್ರಸ್ಟ್‌ನ ಕಾರ್ಯದರ್ಶಿ ಅಬ್ಬಾಸ್ ಅಲಿ ಆದರಮಗ್ಗಿ, ಸಹ ಕಾರ್ಯದರ್ಶಿ ಹಸನಸಾಬ ಎಂ.ಕಮ್ಮಾರ ಜಂಟಿ ತಿಳಿಸಿದ್ದಾರೆ.

Please follow and like us:
error