ಕಾನೂನು ವಿದ್ಯಾಥಿಗಳಿಗೆ ಜೀವನದಲ್ಲಿಒಳ್ಳೆಯ ಭವಿಷ್ಯವಿದೆ

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದವಾರ್ಷಿಕೊತ್ಸವ ಮತ್ತು ಬೀಳ್ಕೊಡುಗೆ ಸಮಾರಂಭದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯ ದಲ್ಲಿವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ವಿದ್ಯಾಥಿಗಳಿಗೆ ಮತ್ತು ನಿವೃತ್ತಿಹೊಂದುತ್ತಿರುವ ಜಿಲ್ಲಾ ನ್ಯಾಯಾಧೀಶರಿಗೆ ಬೀಳ್ಕೂಡುಗೆ ಸಮಾರಂಭವನ್ನುಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಧಾಟಕರಾಗಿ ಆಗಮಿಸಿದ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ   ಸಿ.ಎಸ್. ಮಾಳಗೆ ಕಾನೂನು ವಿದ್ಯಾಥಿಗಳಿಗೆ ಜೀವನದಲ್ಲಿ ಒಳ್ಳೆಯ ಭವಿಷ್ಯವಿದೆ ಎಲ್ಲ ವಿದ್ಯಾಥಿಗಳು ಸ್ನಾತಕೋತ್ತರ ಪದವಿ ಯನ್ನುಹೊಂದಿಬೇಕೆಂದು ಕಿವಿ ಮಾತನ್ನು ಹೇಳಿದರು. ಅತಿಥಿಗಳಾಗಿ ಆಗಮಿಸಿದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಥೀಶರಾದ ಶ್ರೀ.ಕೆ ಶಿವರಾಂ ಅವರು ವಕೀಲರುನ್ಯಾಯಾಲಯದಲ್ಲಿ ವೃತ್ತಿ ನೀತಿ ನಿಯಮಗಳನ್ನು ತಪ್ಪದೇ ಪಾಲಿಸಿದರುಯಶಸ್ವಿ ನ್ಯಾಯಾವಾದಿಗಳಾಗಬೇಕೆಂದು ಹೇಳಿದರು. ಇನ್ನೊರ್ವ ಅತಿಥಿ ಯಾದಕಿರಿಯ ಶ್ರೇಣೆ ನ್ಯಾಯಾಥೀಶರಾದ ಶ್ರೀ ಮತಿ. ಕಾವೇರಿ ಲೇ.ಲೇ ಅವರುಜೀವನದಲ್ಲಿ ಬರುವಂತಹ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯಶಸ್ವಿ ಯಾಗಬೇಕೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಕೆ.ಬಿ.ಬ್ಯಾಳಿ ವಹಿಸಿದ್ದರು.ಪ್ರಾಚಾರ್ಯರಾದ ಡಾ.ಬಿ.ಎಸ್. ಹನಸಿ ಅತಿಥಿಗಳನ್ನು ಸ್ವಾಗತಿಸಿದರು ಕಾಲೇಜಿನವಾರ್ಷಿಕ ವರದಿಯನ್ನು ಉಪನ್ಯಾಸತಿ ಶ್ರೀಮತಿ.ಉಷಾದೇವಿ ಹಿರೇಮಠ ಓದಿದರು.ವಿದ್ಯಾರ್ಥಿಯಾದ ಮೈಲಾರಗೌಡ ನಿರೂಪಿಸಿದರು ಮತ್ತು ಬೆಳ್ಳೆಪ್ಪ ವಂದನಾರ್ಪಣೆನೆರವೇರಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ.   ಬಸವರಾಜ ಎಸ್.ಎಮ್.  ಎಸ್.ಎಮ್. ಪಾಟೀಲ.ಸಯ್ಯದ ಅಮೀರ ಕುಸ್ಸುರು. ಬಸವರಾಜ ಅಳ್ಳಳ್ಳಿ ಮತ್ತು ಗ್ರಂಥಪಾಲಕರಾದ ರುದ್ರಪ್ಪ ಪೂಜಾರ ಮತ್ತು ಪ್ರಥಮ.ದ್ವಿತೀಯ ಮತ್ತುತೃತೀಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.

Please follow and like us:
error