You are here
Home > Koppal News > ಡಿ. ೨೩ ರಿಂದ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಯುವಜನಮೇಳ

ಡಿ. ೨೩ ರಿಂದ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಯುವಜನಮೇಳ

ಕೊಪ್ಪಳ ಡಿ. 22  : ರಾಜ್ಯ ಮಟ್ಟದ ಯುವಜನಮೇಳವು ಡಿ. ೨೩ ರಿಂದ ೨೫ ರವರೆಗೆ ಎರಡು ದಿನಗಳ ಕಾಲ  ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲ್ಲಿ ನಡೆಯಲಿದೆ.
   ಯಾದಗಿರಿ ಜಿಲ್ಲೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ವಿಭಾಗ ಮಟ್ಟದ ಯುವಜನಮೇಳದಲ್ಲಿ ವಿಜೇತರಾದ ವೈಯಕ್ತಿಕ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಯುವಜನಮೇಳದಲ್ಲಿ ಭಾಗವಹಿಸಲು ಅರ್ಹರು. 
ಭಾಗವಹಿಸುವ ಸ್ಪರ್ಧಾಳುಗಳು ಎಂದಿನಂತೆ ತಮ್ಮ ಸ್ಪರ್ಧೇಯ ಪರಿಕರಣ ಹಾಗೂ ವೇಷಭೂಷಣದೊಂದಿಗೆ ಹಾಜರಿದ್ದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸುವ ಸ್ಪರ್ದಾಳುಗಳಿಗೆ ಪ್ರಯಾಣ ಭತ್ಯೆಯನ್ನು ವ್ಯವಸ್ಥಾಪಕರು ಕಾರ್ಯಕ್ರಮ ಮುಗಿದ ನಂತರ ನೀಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ದೂರವಾಣಿ ಸಂಖ್ಯೆ:೦೮೫೩೯-೨೦೧೪೦೦ಕ್ಕೆ ಸಂಪರ್ಕಿಸಬಹುದಾಗಿದೆ ಎಂದು   ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ  ತಿಳಿಸಿದ್ದಾರೆ.

Leave a Reply

Top