ಎಲ್ಲಾ ಧರ್ಮಗಳು ನೀತಿಗಳನ್ನು ಬೋಧಿಸುತ್ತವೆ-ಜನಾರ್ಧನ

ಕೊಪ್ಪಳ, ಫೆ. ೨೦. ಜಗತ್ತಿನ ಸರ್ವಧರ್ಮಗಳು ಕೇವಲ ಉತ್ತಮ ನೀತಿಗಳನ್ನು ಬೋಧಿಸುತ್ತವೆ ನಾವೇ ನೀತಿ ತಪ್ಪುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಟಿ. ಜನಾರ್ಧನ ವಿಷಾಧಿಸಿದರು.
ಅವರು ತಾಲೂಕಿನ ಹಳೇಬಂಡಿಹರ್ಲಾಪೂರದ ವರಸಿದ್ಧಿ ವಿನಾಯಕ ಯುವಕ ಸಂಘ, ಉನ್ನತಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಭಗತ್ ಸಿಂಗ್ ಯುವಕರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ನಿಮಿತ್ಯ ೪ನೇ ವರ್ಷದ ಸಾಂಸ್ಕೃತಿಕೋತ್ಸವ ಹಾಗೂ ಶ್ರೀ ಶಾಂತಲಿಂಗೇಶ್ವರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ಮಾತನಾಡಿದ ಅವರು, ಗ್ರಾಮದಲ್ಲಿ ಈಶ್ವರ ದೇವಸ್ಥಾನಕ್ಕೆ ಸಹಾಯ ಮಾಡುವದಾಗಿ ತಿಳಿಸಿದ ಅವರು, ಶಿಕ್ಷಣ ಮತ್ತು ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಹರಿಸಬೇಕು, ಜಿಲ್ಲೆಯ ಶೌಚಾಲಯ ಕ್ರಾಂತಿ ದೇಶಕ್ಕೆ ಮಾದರಿಯಾಗಿದೆ, ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ, ಸರ್ವ ಧರ್ಮದ ಯುವಕರು ಸೇರಿಕೊಂಡು ಮಾಡಿರುವ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಯುವ ಸಂಘಟಕ ಮಂಜುನಾಥ ಜಿ. ಗೊಂಡಬಾಳ ವಹಿಸಿ ಮಾತನಾಡಿ, ಪ್ರಸ್ತುತ ಕಾಲಮಾನ ತೀರಾ ಕುಲಗೆಟ್ಟಿದ್ದು ಸಮಾಜ ತಿದ್ದುವ ಕೆಲಸಕ್ಕೆ ಯುವಜನರು ಮುಂದಾಗಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ, ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತದೆ ಆದರೆ ಅವುಗಳ ಅನುಷ್ಠಾನದಲ್ಲಿ ತೊಂದರೆ ಇದೆ. ಯುವಜನರು ಅವುಗಳನ್ನು ಸರಿಯಾಗಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.
ತಾ. ಪಂ. ಮಾಜಿ ಅಧ್ಯಕ್ಷ ಅಧ್ಯಕ್ಷ ದೇವಣ್ಣ ಮೇಕಾಳಿ, ಗ್ರಾ. ಪಂ. ಅಧ್ಯಕ್ಷೆ ರತ್ನಮ್ಮ ಬ್ರಹ್ಮಯ್ಯ, ಉದ್ಯಮಿ ಕೆ. ಚಂದ್ರಶೇಖರ ಐಎಲ್‌ಸಿ, ಸುನೀಲ ಇಜಾರಿ, ಜಿ. ಸುಬ್ಬಾರಡ್ಡಿ, ಕೆ. ವೆಂಕಟಯ್ಯ, ನಿಂಗಜ್ಜ ಹ್ಯಾಟಿ, ಕೆ. ಕಲ್ಪನಾ, ಅನ್ನಪೂರ್ಣ, ಅನಿತಾ ರಾಮಸ್ವಾಮಿ, ವಿಜಯಕುಮಾರ ಇತರರು ಇದ್ದರು. 
ಈ ಸಂದರ್ಭದಲ್ಲಿ ಜ್ಯೋತಿ ಮಂಜುನಾಥ ಗೊಂಡಬಾಳ, ಕಲಾವಿದ ವೈಶಂಪಾಯನ, ಕರಾಟೆಪಟು ಶ್ರೀನಿವಾಸ ಪಂಡಿತ್, ಹಾಸ್ಯ ಭಾಷಣಕಾರ ಹನುಮಂತರಾವ್ ಕೆಂಪಳ್ಳಿ, ನಾಗರತ್ನ ಹುಲಿಗಿ,  ಕಾಶಯ್ಯಸ್ವಾಮಿ ಹಿರೇಮಠ ಇತರರಿಗೆ ಶ್ರೀ ಶಾಂತಲಿಂಗೇಶ್ವರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಕಲಾವಿದ ವೈಶಂಪಾಯನ ಮತ್ತು ಹನುಮಂತರಾವ್ ಕೆಂಪಳ್ಳಿ ಹಾಸ್ಯ ಕಾರ್ಯಕ್ರಮ, ಮಾಸ ಡ್ಯಾನ್ಸ್ ಶಾಲೆ ಕಾರಟಗಿ, ಕೊಪ್ಪಳದ ಗ್ಲೋಬಲ್ ಡ್ಯಾನ್ಸ್ ಅಕಾಡೆಮಿ, ಸಾಹಿತ್ಯ ಗೊಂಡಬಾಳ, ಶಿವಾನಂದ ಪಂಥರ ಇತರರು ಭಾವಗೀತೆ, ಲಾವಣಿ, ಜನಪದ ಗೀತೆ, ಜನಪದ ನೃತ್ಯ, ಸಿನಿಮಾ ನೃತ್ಯ, ಭಜನೆ, ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರೇಕ್ಷಕರ ಮನಗೆದ್ದರು.
ಚಂದ್ರಕಲಾ ಗೋಡೆಕರ್ ಪ್ರಾರ್ಥಿಸಿದರು, ಮಂಜುನಾಥ ಮುಂಡರಗಿ ಸ್ವಾಗತಿಸಿದರು, ಸಂಸ್ಥೆಯ ಕಾರ್ಯದರ್ಶಿ ಧರ್ಮಣ್ಣ ಹಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ಹನುಮೇಶ ಶಿವಪುರ ವಂದಿಸಿದರು.
Please follow and like us:
error