’ಸ್ವಾತಂತ್ರ್ಯಸೇನಾನಿ ಶಂಕ್ರಪ್ಪ ಯರಾಶಿ’ ಗ್ರಂಥ ಬಿಡುಗಡೆ

ಫೆ ೧೧ ರಂದು ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ೧೭ ನೇ ಕೃತಿ
ಕೊಪ್ಪಳ: ದಿನಾಂಕ ೧೧-೦೨-೨೦೧೪ ರಂದು ಮಂಗಳವಾರ ಸಂಜೆ ೫ ಘಂಟೆಗೆ ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರು ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ೧೭ ನೇ ಕೃತಿ ’ಸ್ವಾತಂತ್ರ್ಯಸೇನಾನಿ ಶಂಕ್ರಪ್ಪ ಯರಾಶಿ’ ಗ್ರಂಥ ಬಿಡುಗಡೆ ನಡೆಯಲಿದೆ. 
ಮುಂಡರಗಿಯ ಪರಮಪೂಜ್ಯ ತ್ರಿವಿಧ ದಾಸೋಹಿ ಶ್ರೀಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. 
ಲಿಂಗನಾಯಕನಳ್ಳಿಯ ಶ್ರೀ.ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳು, ಹಿರೇಸಿಂದೋಗಿಯ  ಶ್ರೀ.ಮ.ನಿ.ಪ್ರ. ಚಿದಾನಂದ ಮಹಾಸ್ವಾಮಿಗಳು, ಮರೇಗುದ್ದಿಯ ಶ್ರೀ.ಮ.ನಿ.ಪ್ರ. ಗುರುಪಾದ ಮಹಾಸ್ವಾಮಿಗಳು, ಸವದತ್ತಿ-ಬಿದರಿಯ ಶ್ರೀ.ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸುವರು. 
ಬೇವೂರು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಹಾಂತೇಶ ಮಲ್ಲನಗೌಡರ ಗ್ರಂಥ ಕುರಿತು ಮಾತನಾಡಲಿದ್ದಾರೆ. ಧಾರವಾಡದ ಕೆ.ಎಂ.ಎಫ್ ಅಧ್ಯಕ್ಷರಾದ ಬಸವರಾಜ ಅರಬಗೊಂಡ, ಜೋಯಿಸರ ಹರಳಳ್ಳಿಯ ಶೇಖರಗೌಡ ಚವಡಪ್ಪಳವರ, ಅರಸಿಕೇರಿಯ ಎನ್. ಕೊಟ್ರೇಶ, ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ, ಸುಗ್ನಳ್ಳಿಯ ಬಸವರಾಜ ನಾವಿ, ಜಂತ್ಲಿ ಶಿರೂರಿನ ಪೆರೂರಿ ವೆಂಕಯ್ಯ, ಚನ್ನಪ್ಪ ಬೂದಿಹಾಳ, ಹೆಸರೂರಿನ ಶಾಂತಲಿಂಗಯ್ಯ ಶಿವಯ್ಯ ಶಾಸ್ತ್ರೀಮಠ, ಕೊಪ್ಪಳ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ವೆಂಕಣ್ಣ ಯರಾಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

Leave a Reply