ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿ ಮತ್ತು ನಶಾ ಮುಕ್ತ ಕಾರ್ಯಕ್ರಮ

ದಿ. ೨೧.೦೧.೨೦೧೫ ರಂದು ನಗರದ ಗುಳಗಣ್ಣವರ ಪಾಲಿಟೇಕ್ನಿಕ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿ ಮತ್ತು ನಶಾಮುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ  ಉಪನ್ಯಾಸಕರಾದ ರಮೇಶ ದಿಕ್ಷಿತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಸಂತ ಪೂಜಾರ ರವರು ಸ್ವಾಮಿ ವಿವೇಕಾನಂದರ ಕುರಿತು ಅವರ ವಿಚಾರ, ಆದರ್ಶ, ತತ್ವಗಳು, ಅವರ ಮೌಲ್ಯಗಳನ್ನು   ಮತ್ತು ವಿಶ್ವವಿಜೇತ ವಿವೇಕಾನಂದರು ಅನುವಂತ  ಮಾತುಗಳನ್ನು    ವ್ಯಕ್ತಪಡಿಸಿದರು. ಹಾಗೆಯೆ ಅವರ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

   ಹಾಗೆಯೆ ಇನ್ನೋರ್ವ ಅತಿಥಿ ಡಾ. ಕೆ.ಜಿ ಕುಲಕರ್ಣಿ ಈ ದೇಶದಲ್ಲಿ ಯುವಕರು , ಡ್ರಗ್ಸ್, ಮಧ್ಯಪಾನ, ಗುಟುಕಾ, ತಂಬಾಕು ಧೂಮಪಾನಗಳಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ, ಆದ್ದರಿಂದ ವಿದ್ಯಾರ್ಥಿಗಳು ಇಂತಹ ದುಷ್ಟಚಟಗಳಿಂದ ದೂರ ವಿರಬೇಕು ಎಂದು ವಿದ್ಯಾರ್ಥಿಗಳಲ್ಲಿ ಕಾಳಜಿ ಮೂಡಿಸುವುದ ಮುಖಾಂತರ ಯುವಕರಲ್ಲಿ ಜಾಗೃತಿ ಮೂಡಿಸಿದರು.  
ಈ ಸಂದರ್ಭದಲ್ಲಿ  ಬಾಗಣ್ಣ ಎಸ್ ಹೊತಿನಮಡಿ ಪ್ರಸ್ತಾವಿಕವಾಗಿ ಮಾತನಾಡಿ   ನಾನು ಒಬ್ಬ ವಿದ್ಯಾರ್ಥಿಯಾಗಿ ಈ ದೇಶದ ಪ್ರಜೆಯಾಗಿ ದೇಶದಲ್ಲಿ ಹೆಚ್ಚುತ್ತಿರುವ ದುಷ್ಟಚಟಗಳನ್ನು ಮಾಡುತ್ತಿದ್ದರೆ ಅಥವಾ ಮಾಡುವವರು ಕಂಡರೆ ಅದನ್ನು ತಡೆಯುವಲಿ ಶ್ರಮಿಸುತ್ತೇನೆ ಮತ್ತು ನನ್ನಿಂದ ಈ ದೇಶಕ್ಕೆ ಹಾಗೂ ನನ್ನ ಕುಟುಂಬಕ್ಕೆ ದಕ್ಕೆ ತರುವಂತಹ ಯಾವುದೇ ರೀತಿಯ ದಕ್ಕೆ ತರುವಂತ ಕೆಲಸಕ್ಕೆ ಕೈ ಹಾಕುವುದಿಲ್ಲ. ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತಿದ್ದೇನೆ  ಎಂದು ಪ್ರತಿಜ್ಞಾವಿಧಿ  ಭೋಧಿಸಿದರು. ಆನಂದ ಆಶ್ರೀತ್ ವಂಧಿಸಿದರು. ಪ್ರಶಾಂತ ಮತ್ತೂರು ನಿರೂಪಿಸಿದರು. ಮತ್ತು ಎಲ್ಲಾ ಪದಾಧಿಕಾರಿಗಳು, ಉಪನ್ಯಾಸಕರು ನೂರಾರು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.   

Leave a Reply