ಕಜಾಪ ಜಿಲ್ಲಾ ಅಧ್ಯಕ್ಷರಾಗಿ ಗೊಂಡಬಾಳ ನೇಮಕ.

ಕೊಪ್ಪಳ, ಮಾ. ೧೪. ಕೊಪ್ಪಳ ಜಿಲ್ಲೆಯ ಯುವ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಕನ್ನಡ ಜಾನಪದ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕಜಾಪ ರಾಜ್ಯ ಕಾರ್ಯಾಧ್ಯಕ್ಷ ಡಾ|| ಎಸ್. ಬಾಲಾಜಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಘಟಕದ ರಚನೆ ಮಾಡಿ, ಜಿಲ್ಲೆಯ ಜಾನಪದ ಕಲೆಗಳ ದಾಖಲೀಕರಣ, ಕ್ಷೇತ್ರಕಾರ್ಯ, ತರಬೇತಿ, ಸ್ಪರ್ಧೆಗಳ ಮೂಲಕ ಜಾನಪದ ಕಲೆಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಕಜಾಪ ಮಾಡಲಿದೆ.
ಜಿಲ್ಲೆ, ತಾಲೂಕ, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಘಟಕಗಳನ್ನು ರಚಿಸಿ ಸಂಘಟನೆ ಮಾಡಬೇಕಿದ್ದು ಆಸಕ್ತರು ಮಂಜುನಾಥ ಜಿ. ಗೊಂಡಬಾಳ (ಮೊ ೯೪೪೮೩೦೦೦೭೦) ರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಜಿಲ್ಲಾ ಅಧ್ಯಕ್ಷರಾದ ಗೊಂಡಬಾಳರನ್ನು ಪತ್ರಕರ್ತ ಗೌರೀಶ ಅಕ್ಕಿ, ಜಿ. ಎಸ್. ಗೋನಾಳ, ಸಾಧಿಕ ಅಲಿ, ಮಂಜುನಾಥ ಡಿ. ಡೊಳ್ಳಿನ, ಡಾ|| ಮಹಾಂತೇಶ ಮಲ್ಲನಗೌಡರ, ಜೀವನಸಾಬ ಬಿನ್ನಾಳ, ವಿಜಯ ಅಮೃತ್‌ರಾಜ್, ಉಮಾಶಂಕರ ಹಿರೇಮಠ, ಸ. ಶರಣಪ್ಪ ಪಾಟೀಲ, ಗವಿಸಿದ್ದಪ್ಪ ಕರ್ಕಿಹಳ್ಳಿ ಇತರರು ಅಭಿನಂದಿಸಿದ್ದಾರೆ.

Please follow and like us:
error