ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ : ರುದ್ರೇಶ ವಕ್ರಾಣಿಗೆ ಬಹುಮಾನ

 ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಛಾಯಾಚಿತ್ರ ಸಮೂಹ ಸಂಸ್ಥೆಯ ೬ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಫರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ರುದ್ರೇಶ ವಕ್ರಾಣಿ ಅವರ ಛಾಯಾಚಿತ್ರವು ಮೆಚ್ಚುಗೆ ಪಡೆದ ಚಿತ್ರ ಬಹುಮಾನ ಪಡೆದುಕೊಂಡಿದೆ. 
ಛಾಯಾಚಿತ್ರ ಸ್ಪರ್ಧೆಯಲ್ಲಿ ಮದುವೆ ಸಂಭ್ರಮ ಮತ್ತು ಪಿಕ್ಟೋರಿಯಲ್ ಎಂಬ ಎರಡು ವಿಭಾಗಗಳನ್ನು ನೀಡಲಾಗಿತ್ತು. ರಾಜ್ಯದ ಎಲ್ಲೆಡೆಯಿಂದ ಸ್ಪರ್ಧೆಗೆ ಬಂದಿದ್ದ ೭೬ ಛಾಯಾಗ್ರಾಹಕರ ೪೮೦ ಛಾಯಾಚಿತ್ರಗಳಲ್ಲಿ ರುದ್ರೇಶ ವಕ್ರಾಣಿ ಅವರ ಛಾಯಾಚಿತ್ರವು ಪಿಕ್ಟೋರಿಯಲ್ ವಿಭಾಗದಲ್ಲಿ ಮೆಚ್ಚುಗೆ ಪಡೆದ ಚಿತ್ರ ಬಹುಮಾನ ಗಳಿಸಿದೆ. ಸ್ಪರ್ಧೆಯಲ್ಲಿ ಸಾಗರದ ಕೆ.ಎಸ್.ರಾಜಾರಾಮ್, ಕೆ.ಚಂದ್ರಶೇಖರ, ಕಮಲಾಪುರದ ಪಂಪಯ್ಯ ಮಳಿಮಠ, ಹೊಸಪೇಟೆಯ ಶಿವಶಂಕರ ಬಣಕಾರ ಹಾಗೂ ಇಳಕಲ್‌ದ ಚಂದ್ರಶೇಖರ ಮಾಳಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕವನ್ನು ಒಳಗೊಂಡಿದ್ದ ಪ್ರಶಸ್ತಿಯನ್ನು ಇಳಕಲ್‌ನಲ್ಲಿ ಭಾನುವಾರ ನಡೆದ ಸಮೂಹ ಸಂಸ್ಥೆಯ ವಾಷಿಕೋತ್ಸವ ಸಮಾರಂಭದಲ್ಲಿ ರುದ್ರೇಶ ವಕ್ರಾಣಿ
ಗೆ ವಿತರಿಸಲಾಯಿತು. 
ರುದ್ರೇಶ ವಕ್ರಾಣಿ ಅವರ ಈ ಸಾಧನೆಗೆ ಪತ್ರಕರ್ತರಾದ ಸಿರಾಜ್ ಬಿಸರಳ್ಳಿ, ಸಲೀಮ ಮುಂಡರಗಿ, ದೊಡ್ಡೇಶ ಯಲಿಗಾರ, ಚಲನಚಿತ್ರ ನಿರ್ದೇಶಕ ಬಸವರಾಜ ಕೊಪ್ಪಳ,ಡಾ||ವಿಶ್ವನಾಥ ನಾಲವಾಡ, ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ. 
Please follow and like us:
error