ಕೊಪ್ಪಳ ನಗರಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ

 ಕೊಪ್ಪಳ-೦೪ ರಾಜ್ಯ ಕೃಷಿ ಸಚಿವರಾದ   ಕೃಷ್ಣಬೈರೇಗೌಡರು ಕೊಪ್ಪಳ ನಗರಕ್ಕೆ ಆಗಮಿಸುತ್ತಿದ್ದು ಬೆಳಗ್ಗೆ ೧೦.೩೦ ಕ್ಕೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ ನಡೆಸುವರು ತದನಂತರ ಸಾಯಂಕಾಲ ೫.೩೦ ಕ್ಕೆ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯಕ್ಕೆ ಭೇಟಿ ನೀಡಿ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವರು. ಈ ಸಭೆಯಲ್ಲಿ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನ ಪರಿಷತ ಸದಸ್ಯರು, ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪಕ್ಷದ ವಕ್ತಾರರಾದ ಅಕ್ಬರಪಾಷ ಪಲ್ಟನ್  ತಿಳಿಸಿದ್ದಾರೆ.
Please follow and like us:
error