ಅಳವಂಡಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಉತ್ತಮ ಸಾಧನೆ

 ಕೊಪ್ಪಳ ತಾಲೂಕು ಅಳವಂಡಿಯ ಶ್ರೀ ಶಿವಮೂರ್ತಿಸ್ವಾಮಿ ಕಟ್ಟಿಮನಿ ಇನಾಮದಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ಜರುಗಿದ ಅಂತರ ಕಾಲೇಜು ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.  
ಕಾಲೇಜಿನ ತೃತಿಯ ಸೆಮಿಸ್ಟರ್ ವಿಭಾಗದ ವಿದ್ಯಾರ್ಥಿ ಮಂಜಪ್ಪ ಪುರದ ಇವರು ೫೦೦೦ ಮೀ ಮತ್ತು ೧೦೦೦೦ ಮೀ. ಓಟಗಳ ಸ್ಪರ್ಧೆಯಲ್ಲಿ ನೂತನ ದಾಖಲೆ ಸಹಿತ ಪ್ರಥಮ ಸ್ಥಾನ ಹಾಗೂ ೧೫೦೦ ಮೀ. ಓಟ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ. ಬಿ.ಎ. ೫ನೇ ಸೆಮಿಸ್ಟರ್ ವಿದ್ಯಾರ್ಥಿ ಆನಂದ ಸಾಲಮನಿ ೪೦೦ ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. 
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಕೆ.ರಾಘವೇಂದ್ರ ಹಿಟ್ನಾಳ, ಕಾಲೇಜು ಅಭಿವೃದ್ದಿ ಸಮಿತಿಯ ಸರ್ವ ಸದಸ್ಯರು, ಪ್ರಾಚಾರ್ಯರು, ಶಿಕ್ಷಕ ಮತ್ತು ವಿದ್ಯಾರ್ಥಿ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.
Please follow and like us:
error