ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಶಿವರಾಮಗೌಡರ ಕೊಡುಗೆ ಅನನ್ಯ: ಪಿ.ಜಿ.ಆರ್. ಸಿಂಧ್ಯಾ

ಗಂಗಾವತಿ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಶ್ರೀ ಶಿವರಾಮಗೌಡರ ಕೊಡುಗೆ ಶ್ಲಾಘನೀಯವಾಗಿದ್ದು ಎಂದು ಮಾಜಿ ಗೃಹ ಸಚಿವ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾರವರು ಅಭಿಪ್ರಾಯಪಟ್ಟರು.
ಅವರು ಇಂದು ಗಂಗಾವತಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಮೇಲೆ ಶಿವರಾಮಗೌಡರು ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ೨೦೧೨-೧೩ನೇ ಸಾಲಿನ ಮೊದಲ ಕಂತಿನಲ್ಲಿ ಮಂಜೂರು ಮಾಡಿದ್ದ್ದ ರೂ.: ೦೫.೦೦ ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ತರಬೇತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಥೆಗೆ ಶಿವರಾಮಗೌಡರು ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡುವುದಲ್ಲದೇ ತಮ್ಮ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ರೂ. ೦೫.೦೦ ಲಕ್ಷ ಅನುದಾನವನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ನಮ್ಮ ಸಂಸ್ಥೆಯ ಸ್ಕೌಟ್ಸ್ ಮತ್ತು ಗೌಡ್ಸ್ ಶಿಬಿರಾರ್ಥಿಗಳಿಗೆ ತರಬೇತಿಗೆ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಅವರು ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದ ಅವರು, ಶಿವರಾಮಗೌಡರ ಸೇವೆಯು ಸದಾ ಹೀಗೆ ಇರಲಿ ಎಂದರು. ಇದೇ ಸಂದರ್ಭದಲ್ಲಿ ಶಿವರಾಮಗೌಡರನ್ನು ಸನ್ಮಾನಿಸಲಾಯಿತು.
ತೃಪ್ತಿ ತಂದಿದೆ: ಇದೇ ಸಂದರ್ಭದಲ್ಲಿ ನಾನು ನೀಡಿದ ಅನುದಾನವು ಸದ್ಬಳಕೆಯಾಗಿದ್ದು ಖುಷಿ ತಂದಿದೆ ಎಂದು ಸನ್ಮಾನ ಸ್ವೀಕರಿಸಿದ ಶಿವರಾಮಗೌಡರು ಅಭಿಪ್ರಾಯ ವ್ಯಕ್ತಪಡಿಸಿದರು. 
Please follow and like us:

Leave a Reply