ನಾಯಕತ್ವ ಬದಲಾವಣೆ ಇಲ -ಸಿಎಂ ಸಿದ್ದರಾಮಯ್ಯ

ಕೊಪ್ಪಳ :  ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ. ದಲಿತರು ಸಿಎಂ ಆಗಬಾರದು ಅಂತೇನಿಲ್ಲ. ಆದ್ರೆ, ಸದ್ಯಕ್ಕೆ ನಾನೇ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದ ಬಸಾಪುರ ಬಳಿ ಇರುವ ಖಾಸಗಿ ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವ್ರು. ತಮಗೆ ಯಾವುದರ ಬಗ್ಗೆಯೂ ಭಯವಿಲ್ಲ. ಆದ್ರೆ, ಜನರ ಅಭಿಪ್ರಾಯಕ್ಕೆ ಮಾತ್ರ ಭಯಪಡ್ತೇನೆ ಅಂತಂದ್ರು. ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗುತ್ತೆ ಎಂಬ ಮಾತು ಕೇವಲ ಊಹಾಪೋಹ. ದಲಿತರು ಮುಖ್ಯಮಂತ್ರಿಯಾಗಬೇಕು. ಅವ್ರಿಗೂ ಅವಕಾಶ ಬಂದಾಗ ಸಿಎಂ ಆಗ್ತಾರೆ. ಆದ್ರೆ, ಈಗ ರಾಜ್ಯದಲ್ಲಿ ನಾನೇ ಸಿಎಂ. ನಾಯಕತ್ವ ಬದಲಾವಣೆ ಇಲ್ಲ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವ್ರು ತಮ್ಮ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸೋಲ್ಲ. ಹಾಗೆ ಪತ್ರದ ಪ್ರತಿ ನಿಮ್ಮಲ್ಲಿದ್ದರೆ ಕೊಡಿ ಎಂದು ಮಾಧ್ಯಮದವ್ರಿಗೆ ಮರುಪ್ರಶ್ನೆ ಹಾಕಿದ್ರು. ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ವಿಚಾರ ಕುರಿತಂತೆ ರಾಜ್ಯಪಾಲರು ಆ ಪಟ್ಟಿಗೆ ಒಪ್ಪಿಗೆ ಕೊಡ್ತಾರೆ ಎಂಬ ವಿಶ್ವಾಸವಿದೆ ಅಂತಂದ್ರು. ಇನ್ನು ತಾವು ನಾಸ್ತಿಕ ಎಂದು ಎಲ್ಲೂ ಹೇಳಿಲ್ಲ. ಹಾಗಂದ ಮಾತ್ರ ನಾನು ದಿನಾಲೂ ದೇವಸ್ಥಾನಕ್ಕೆ ಹೋಗೋದಿಲ್ಲ. ನಮ್ಮ ಊರಿಗೆ ಹೋದಾಗ ದೇವರಿಗೆ ಹೋಗ್ತೇನೆ. ಮೊನ್ನೆ ತಾವಿದ್ದ ಹೆಲಿಕ್ಯಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದಕ್ಕೂ ಮತ್ತು ನಿನ್ನೆ ಮನೆ ದೇವರಿಗೆ ಹೋಗಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಅದು ಕೇವಲ ಕಾಕತಾಳೀಯ ಎಂದು ಸಮರ್ಥಿಸಿಕೊಂಡ್ರು. ಅಧಿಕಾರಿಗಳನ್ನು ಆಡಳಿತಾತ್ಮಕ ದೃಷ್ಠಿಕೋನದಿಂದ ವರ್ಗಾವಣೆ ಮಾಡಲಾಗುತ್ತದೆ . ಆದ್ರೆ, ಇವುಗಳಿಗೆ ರಾಜಕೀಯ ಬಣ್ಣ ಬಳಿಯುವುದು ಬೇಡ ಅಂತ ಸಿಎಂ ಸಿದ್ದರಾಮಯ್ಯ ಹೇಳಿದರು.

Leave a Reply